ಹಿರಿಯರು
- Hashtag Kalakar
- Dec 10, 2025
- 1 min read
By Padma Shenoy
ನಮ್ಮ ಮನೆಯ ಹಿರಿಯರರಾಗಿ ನೀವು ನಡೆಸಲು
ಸುಗಮ ಎಂದು ಹಾದಿ ನಮಗೆ ರಾತ್ರಿ ಹಗಲು
ನಿಮ್ಮ ಆಶಿರ್ವಾದ, ನಮಗೆ ವರಪೃಸಾದ
ದೊರಕಲಿ ಯೆಂದೆಂದಿಗೂ ||ನಮಗೆ||
ದುಡಿಮೆಯೇ ದೇವರೆಂದು ತಿಳಿದಿರಿ
ಆರೋಗ್ಯವೆ ಭಾಗ್ಯವೆಂದು ಅರೆತಿರಿ
ನೋವು ತಿಂದ ಮುಖವನ್ನು ಮರೆಸುತಾ
ಸದಾ ಹಸನ್ಮುಖಿಯಾಗಿ ಬಾಳುತಾ
ತಂದೆಯಂತೆ ಜೊತೆಗೆ ನಿಂತು ಧೈರ್ಯವಾ
ನೀಡಿದಿರಿ ತಾಯಿಯಂತೆ ಮಮತೆಯಾ
ತಮ್ಮ ತಂಗಿಯರ ಅಚ್ಚುಮೆಚ್ಚಿನಾ
ಅವರಿಗಾಗಿ ಹುಟ್ಟಿದಂಥ ಹಿರಿಯಣ್ಣಾ
ನಮ್ಮ ಜೀವಕೆಂದು ನೀವೆ ಆಸರೆ
ನಿಧಿಯು ಸಿಕ್ಕ ಹಾಗೆ ನೀವು ನಕ್ಕರೇ
ನಿಮ್ಮ ಉತ್ಸಾಹ ನಮಗೆ ಸ್ಪೂರ್ತಿಯು
ಮರೆಯುವಂತೆಯಿಲ್ಲ ನಿಮ್ಮ ತ್ಯಾಗವು
ದೇವರಲ್ಲಿ ನಮ್ಮದೊಂದೆ ಬೇಡಿಕೆ
ಸಿಗಲಿ ನಮಗೆ ಸದಾ ನಿಮ್ಮ ಹಾರೈಕೇ
ಆಯುರಾರೋಗ್ಯ ಅವನು ನೀಡಲಿ
ನೆಮ್ಮದಿಯು ಸದಾ ಇರಲಿ ಬಾಳಲಿ
By Padma Shenoy

Comments