ಶಿರಡಿ ಸಾಯಿ ಬಾಬಾ
By Sahana Joshi
ಹೋಗೋಣ ಬನ್ನಿ ಎಲ್ಲರೂ ಜೊತೆಗೂಡಿ ।
ನೋಡಲು ಪವಾಡ ಪುರುಷ ಶ್ರೀ ಸಾಯಿ ಬಾಬಾರವರ ಶಿರಡಿ ॥
ಇಂದಿಗೂ ರೋಮಾಂಚನ ಗೊಳಿಸುವುದು ಬಾಬಾರವರ ಪವಾಡಗಳು।
ಸಾರಿ ಸಾರಿ ಹಾಡಿ ಹೇಳುವರು ಎಲ್ಲ ಭಕ್ತಾದಿಗಳು ॥
ಎಣ್ಣೆ ಇಲ್ಲದೆ ದೀಪ ಉರಿಸಿದರು ಅವಧೂತರು।
ಕುದಿಯುವ ಅನ್ನಕೆ ಕೈ ಆಡಿಸಿದರು ಯೋಗಿರಾಜರು॥
ಕುಷ್ಠ ರೋಗಿಯೊಬ್ಬ ಗುಣವಾದ ಬಾಬಾ ಆಶೀರ್ವಾದದಿಂದ ।
ಕೈಬಿಡರು ಬಾಬ ತಮ್ಮನ್ನು ನಂಬಿ ಬಂದವರನ್ನು ಭಕ್ತಿಯಿಂದ ॥
ಕುದುರೆಯನ್ನು ಕಳೆದುಕೊಂಡು ಹುಡುಕುತ್ತಿದ್ದರು ಪಟೇಲರು।
ಹಳ್ಳದ ಕಡೆ ಕೈ ತೋರಿಸಿ ಕುದುರೆ ಅಲ್ಲಿದೆ ಎಂದರು ಫಕೀರರು॥
ಚಾಂದ ಭಾಯ್ ಕರೆದೊಯ್ದರು ಫಕೀರರನ್ನು ಶಿರಡಿಗೆ ।
ಅಲ್ಲಿ 'ಸಾಯಿ' ಎಂಬ ಹೆಸರು ಬಂತು ಬಾಬಾರವರಿಗೆ ॥
ಶಿರಡಿಯ ಬಾಬಾಗೆ ಮಾಡುವರು ಭೂಪಾಲಿ,ಕಾಕಡಾರ್ತಿ, ಧೂಪಾರ್ತಿ, ಶೇಜಾರ್ತಿ।
ಮನವು ತುಂಬಲಾರದು ದರ್ಶನ ಪಡೆದರು ಎಷ್ಟು ಸರ್ತಿ ॥
ಉರಿಯುತ್ತಲೆ ಇರುವುದು ಇಂದಿಗೂ ಬಾಬಾರವರ ಧೂಪ ।
ಅದರ ಹೋಗೆಯಿಂದ ನಶಿಸುವುದು ಭಕ್ತಜನರ ಪಾಪ ॥
ಹೋಗೋಣ ಬನ್ನಿ ಎಲ್ಲರೂ ಜೊತೆಗೂಡಿ ।
ನೋಡಲು ಪವಾಡ ಪುರುಷ ಶ್ರೀ ಸಾಯಿ ಬಾಬಾರವರ ಶಿರಡಿ ॥
By Sahana Joshi

Comments