ಭಾವನೆಗಳು…..
By Naveen S Undri
ಮೂಡಣದಿ ಉದಯಿಸಿದ ರವಿಯು
ಹಿತವಾದ ಬಿಸಿ ಸ್ಪರ್ಶ ನೀಡುತಿರಲು
ಬೆಚ್ಚನೆಯ ಅನುಭವಕೆ ಪ್ರಕೃತಿಯು
ಕಣ್ಬಿಟ್ಟು ಪ್ರತಿಕ್ರಿಯೆ ನೀಡುತಿದೆ
ಏಕೋ ಮನಸು ಹಗುರಾದಂತೆ
ಎಲ್ಲೋ ಒಳಗೆ ಖುಷಿಯಾದಂತೆ
ಗಿರಿ ಶಿಖರಗಳು ನಭಕ್ಕೆ ಏಣಿಯಾದಂತೆ
ಸಪ್ತ ಸಾಗರಗಳು ನನ್ನ ಸಂಗ ಸೇರಿದಂತೆ
ಪಕ್ಷಿಗಳ ಜೊತೆಗೆ ಆಗಸಕ್ಕೆರುವಾಸೆ
ಮಳೆ ಹನಿಗಳ ಜೊತೆ ಭುವಿಯ ಸ್ಪರ್ಶಿಸುವಾಸೆ
ಬಣ್ಣಗಳಒಡಗೂಡಿ ಬಾನ ಚಿತ್ರಿಸುವಾಸೆ
ದುಂಬಿಗಳ ಸಂಗ ಮಕರಂದ ಹೀರುವಾಸೆ
ಬಹುದಿನಗಳ ನಂತರ ನಂಬಿಕೆಯ ಈ ನಗು
ಭರವಸೆಗಳ ಜೊತೆಗೆ ಇರಲಿ ಎಂದೆಂದಿಗೂ...
By Naveen S Undri

Comments