ಬಿಸಿ ಬಿಸಿ ಚಹಾ
By Sahana Joshi
ಬಹು ಜನರ ಪ್ರೀತಿಯ ಪಾನೀಯ ಈ ಚಹಾ |
ನಿನ್ನ ಕುಡಿದಾಗ ಎಲ್ಲರೂ ಅನ್ನುವರು ವ್ಹಾ ವ್ಹಾ||
ನಿನ್ನನ್ನು ತಯಾರಿಸಲು ಬೇಕು ಹಾಲು, ಪುಡಿ ,ಸಕ್ಕರೆ|
ತಲೆನೋವು ಬಂದಾಗ ತೋರುವೆ ನೀ ಅಕ್ಕರೆ||
ಮಳೆ ಬಂದಾಗ ನಿನ್ನ ಜೊತೆ ತಿನ್ನಲು ಬೇಕು ಖಾರಾ, ಬೋಂಡ, ಬಜ್ಜಿ|
ಚಹಾದ ರುಚಿ ಹೆಚ್ಚಾಗುವುದು ಹಾಕಿದಾಗ ಅದಕ್ಕೆ ಸ್ವಲ್ಪ ಶುಂಠಿ ಜಜ್ಜಿ ||
ಚಳಿಗಾಲದಲ್ಲಿ ಬೆಚ್ಚಗಿರಲು ಕುಡಿಯುವರು ಚಹಾ |
ಬೇಸಿಗೆಕಾಲದಲ್ಲಿ ಬೇವರಳಿದರು ಕುಡಿಯಲಾರದೆ ಇರಲಾರೆವು ಚಹಾ ||
ಬಿಡಲಾರೆ ನಾ ಚಹಾ ಕುಡಿಯುವ ಅಭ್ಯಾಸವನ್ನ|
ನಿನ್ನ ಕುಡಿಯುವಾಗಲೆ ಬರೆದ ಈ ಕವನವನ್ನ||
By Sahana Joshi

Comments