ಪ್ರೀತಿಯ ಅಪ್ಪ
By Sahana Joshi
ಅಪ್ಪ, ಬಾಬಾ ,ದಾದಾ ,ತಂದೆ।
ಧೈರ್ಯ ತುಂಬಿರುವುದು ಇವೆರಡು ಅಕ್ಷರಗಳ ಪದಗಳ ಹಿಂದೆ॥
ಸಾಂಸರದ ಭಾರವನು ಹೊತ್ತಿರುವೆ ನೀನು ನಿನ್ನ ಹೆಗಲ ಮೇಲೆ।
ಒತ್ತಡವನ್ನು ತೋರದೆ ಕೋಪವನ್ನು ಮಾಡದೆ ನಮ್ಮನ್ನು ಆಡಿಸುವೆ ನೀ ನಗು ನಗುತ್ತಲೆ ॥
ಕಣ್ರೆಪ್ಪೆ ಅಂತೆ ಕಾಯುವೆ ನೀ ನಮ್ಮೆಲ್ಲರನ್ನು।
ಕಲಿಸಿ ಕೊಡುವೆ ದಿನನಿತ್ಯ ಹೊಸ ಹೊಸ ವಿಷಯವನ್ನು ॥
ನನ್ನ ಜೀವನದ ಆದರ್ಶ ನಾಯಕ ನೀನು।
ನೀನು ಹಾಕಿದ ಹೆಜ್ಜೆಗಳನ್ನ ಅನುಸರಿಸುತ್ತ ಬೆಳೆದೆ ನಾನು॥
ದುಃಖವಾದಾಗ ಬಿಗಿದಪ್ಪಿಕೊಳ್ಳುವೆ ನಾ ನಿನ್ನನು ।
ಬೆನ್ನುತಟ್ಟಿ, ಅನುಭವದ ಮಾತುಗಳನ್ನು ಹೇಳಿ, ನೀಡುವೆ ನೀ ಧೈರ್ಯವನ್ನು॥
ಪಕ್ಷಿಯ ಹಾಗೆ ಹಾರಲು ಕಲಿಸಿದೆ ಬಾನೆತ್ತರಕ್ಕೆ।
ತಲೆ ಎತ್ತಿ ಗೌರವದಿಂದ ಇರುವ ಹಾಗೆ ಬೆಳೆಸಿದೆ ನಿನ್ನೆತ್ತರಕ್ಕೆ॥
ಎಷ್ಟೇ ಉನ್ನತಕ್ಕೇರಿ ಗಳಿಸಿದರು ಗೌರವ ಹಣವನ್ನ।
ತೀರಿಸಲಾರೆ ನಾ ನಿನ್ನ ಪ್ರೀತಿಯ ಋಣವನ್ನ॥
By Sahana Joshi

Comments