ಪ್ರೀತಿ
By Supriya S
ಕನಸಲೂ ನಾ ನಿನ್ನ ಕೋರುವುದಿಲ್ಲ
ಮನಸಿನಲ್ಲಿ ನಾ ನಿನ್ನ ನೆನೆಯುವುದಿಲ್ಲ
ನಿನ್ನ ನೆರಳಲ್ಲಿ ನಾ ಬದುಕಬೇಕಿಲ್ಲ
ಆದರೂ ನಿನ್ನ ನೆನಪುಗಳು ನನ್ನ ಬಿಡುತಿಲ್ಲ
ನಿನ್ನ ಆಸರೆ ನನಗೆ ಬೇಕಾಗಿಲ್ಲ
ನಿನ್ನ ನಗುವಲಿ ನನಗೆ ಸಂತೋಷವಿಲ್ಲ
ನಿನ್ನ ಗೆಲುವಲ್ಲಿ ನನಗೆ ಪಾಲಿಲ್ಲ
ಆದರೂ ನಿನಗಾಗಿ ಮನ ಹಾತೊರೆಯುತಿದೆಯಲ್ಲ
ನೀ ನನ್ನ ತೊರೆದರು ನಾನು ಮರಣಿಸಲಿಲ್ಲ
ನಿನಗಾಗಿಯೇ ಜೀವನವೆಲ್ಲ ಕಾದೇನಲ್ಲ
ಇಂದಿಗೂ ಮನ ನಿನ್ನ ಖುಷಿಯನೇ ಬಯಸುತ್ತಿದೆಯಲ್ಲ
ಅದರಲೆ ನನ್ನ ಜೀವನ ಸಾಗುತಿದೆಯಲ್ಲ
ನನ್ನ ಪ್ರೀತಿ ನಿನ್ನ ಮನ ಮುಟ್ಟುವ
ದಿನಕ್ಕಾಗಿ ನಾ ಕಾಯುತಿರುವೆನು
ಅಂದು ನನಗಾಗಿ ನೀ ಕಂಬನಿ ಸುರಿಸಿದರು
ನಿನ್ನ ಸನಿಹ ನಾ ಇರುವುದಿಲ್ಲ
ಆ ಲೋಕದಿಂದ ದೂರವಾಗಿ
ಪ್ರೀತಿಯ ದೋಣಿಯಲಿ ತೇಲುತಾ
ಬಾರದ ಲೋಕಕ್ಕೆ ನಾ ಪಯಣಿಸುತ್ತಿರುವೆ
ಮುಂದಿನ ಜನ್ಮದಲ್ಲಿ ನನ್ನ ಒಲವ ಅರಿವ ಮಾನವ ಮಿಡಿವ ಹೃದಯ ನನಗೆ ಸಿಗಲಿ..
By Supriya S

Good one
Heart touching
Nice line
Nice
:)