ನನ್ನವಳು
By Supriya S
ಅವಳೇನೂ ಚಂದ್ರಚಕೋರಿಯಲ್ಲ
ಹುಣ್ಣಿಮೆಯ ಚಂದಿರನಂತೆ ಹೊಳೆಯುತ್ತಿಲ್ಲ
ಊರ್ವಶಿಯಂತೆ ಅಪ್ಸರೆಯು ಅಲ್ಲ
ಆದರೂ ಅವಳ ಕಣ್ಣೋಟದಲ್ಲೇ ನನ್ನ ಸೆಳೆಯುತಿಹಳಲ್ಲ.
ಮೈತುಂಬಾ ಒಡವೆಗಳಿಲ್ಲ
ಮೆಣಕೆಯಂತೆ ಬಳುಕುತಿಲ್ಲ
ಅವಳ ನಾಚಿಕೆ ಅವಳ ಮೈ ಒಡವೆಯಾಗಿದೆಯಲ್ಲ
ಆ ಒಂದು ನೋಟವೇ ನನ್ನ ಮೊಹಗೊಳಿಸುತಿದೇಯಲ್ಲ
ಬಡ ಬಡ ಮಾತನಾಡುವುದಿಲ
ಅವಳ ಮಾತು ಆಡಿದರೆ ಮುತ್ತಂತೆ ಇದೆಯಲ್ಲ
ಅವಳ ಮಾತಿನ ಮದ್ಯದ ಮೌನದಲೂ ಒಂದರ್ಥವಿದೆ
ಅದ ತಿಳಿಯಲು ನನ್ನ ಮನ ಹಾತೊರೆಯುತ್ತಿದೆ
ಜೀವನದಲಿ ಕಾದು ಸಾರ್ಥಕ ಎನಿಸಿದೆ ಇಂದು
ಅವಳೊಂದಿಗೆ ಪ್ರತಿ ಹೆಜ್ಜೆ ಇರಿಸಬೇಕೆಂದಿದೆ ಎಂದೆಂದು
ಕೇಳಿದರೆ ನನ್ನ ಜೊತೆ ಬರುವಳೂ ಇಲ್ಲವೋ ತಿಳಿದಿಲ್ಲ
ಆದರೂ ಎಲ್ಲೋ ಒಂದು ಮನದ ಮೂಲೆಯಲಿ ಅವಳು ನನ್ನವಳೇ ಎಂಬ ಆಶಯ ನನ್ನಲಿ ತುಂಬಿದೆಯಲ್ಲೇ.
ಅವಳೊಂದಿಗಿನ ಜೀವನ ಕಾಮನಬಿಲ್ಲು
ಇರಿಸುಮುನಿಸು ಹಾದಿಯ ಅಡಿಗಲ್ಲು
ನಗು ಅಳು ಜೀವನದ ಕಲ್ಲು ಮುಳ್ಳು
ನಾನು ಅವಳು ನಮ್ಮ ಜೀವನದ ಮೈಲುಗಲ್ಲು
By Supriya S

Pure and heartfelt writing.
Good one
ವಾಹ್ ವಾಹ್...ಸೂಪರ್ ಆಗಿದೆ ಈ ಟ್ಯಾಲೆಂಟ್ ಗೊತ್ತಿರಲಿಲ್ಲ
Nice
Beautiful written