ನನ್ನವಳು...
By Naveen S Undri
ಬಾನ ದಾರಿಯಲ್ಲಿ ರವಿಯು ಚಳಿಯ ಭೇದಿಸಿ ಬರುತಿರಲು
ಕಿರಣಗಳ ಸಿಹಿ ಸ್ಪರ್ಶಕೆ ನನ್ನವಳ ನೆನಪಾಗುತಿದೆ...
ಸ್ವಪ್ನ ಲೋಕದ ಸುಂದರಿ ಅವಳು ಬೆಳದಿಂಗಳ ಬಾಲೆ
ಮುಂಗುರಳ ಮರೆಯಲ್ಲಿ ಅವಳ ನಗುವೇ ನನಗೆ ಕರೆಯೋಲೆ
ಸಪ್ತ ಸಾಗರದ ಆಚೆ ಅವಳ ದನಿ ಕೇಳಿದರು
ಈಜುತ್ತಲೆ ಅವಳ ಸೇರುವೆ ಅದೆಷ್ಟೇ ದಣಿದರೂ
ಕಡಲು ಉಕ್ಕುವುದು ಅವಳು ಕೋಪಿಸುತಿರೆ
ಕುಸುಮ ಅರಳುವುದು ಅವಳು ನಗುತಿರೆ
ಅವಳ ಪ್ರೀತಿಗೆ ಶಿಲೆಯು ಕರಗುವುದು
ಸುಲಭವಲ್ಲ ನನ್ನವಳು ಒಲಿಯುವುದು
ಮಕರಂದ ಸಿಕ್ಕಾಗ ದುಂಬಿ ಹಿಗ್ಗಿದಂತೆ
ನನ್ನವಳ ಆಲಿಂಗನ ಸಿಹಿ ಜೇನ ಸವಿದಂತೆ
ಅವಳ ಸೇರಲು ಮನವು ಕಾತರಿಸಿದೆ
ಏಕೋ ತಿಳಿಯದು ಸಮಯ ಕಾಯಿಸುತಿದೆ....!
By Naveen S Undri

Comments