ನಾವಿಕ
By Divya Viswanath Manoj
ಪ್ರಪ್ರಥಮ ನೇಸರನ
ಆಭಕಿರಣ ಹೊಮ್ಮುತಲಿ,
ನಾವಿಕನು ಹೊರಟನು
ದೋಣಿಯಲಿ.
ಚಂದ್ರನನ್ನೇ ನುಂಗಿತೆನಿಸುವ,
ಅಬ್ಬರದ ಅಲೆಗಳ ಮೇಲೆ,
ನೂಕುತ್ತಾ ಹೊರಟನು
ಬದುಕೆಂಬ ತೆಪ್ಪವನು
ಏಕಾಂತದಲಿ.
ನುಗ್ಗಿ ಬಿರುಗಾಳಿಯ ಸೀಳಿ
ಉಬ್ಬರವಿಳಿತದ ಸುಳಿಯಲಿ ತೇಲಿ,
ಜಲ ಸಮಾಧಿಯಾಗುವ ಮುನ್ನ,
ಅದೆಷ್ಟೋ ಜೀವಗಳ ಬುಝ ಹಿಡಿದು ತೋಳುಗಳಲ್ಲಿ ತನ್ನ
ಆಪ್ತರೇನೋ ದಡ ಸೇರಿಸಿ,
ನೆಗೆ ಬೀರಿ ವಿದಾಯ ಹೇಳುತಾ ,ಕೈ ಬೀಸಿ
ತಾ ಮರಳುವನು ತನ್ನ ದೈನಂದಿನ ವಾಸ್ತವಕೆ
ಅಪ್ಪಳಿಸುವ ಅಲೆಗಳ ಎಣಿಕೆಯ
ಲೆಕ್ಕಾಚಾರವ ಮಾಡುವ
ಜಲ ಗುಣಿತಜ್ಞ,
ಜೀವನದ ಅಘಾದತೆಗೂ ಸರಿತೆಯ ವೈಶಾಲ್ಯತೆಗು,
ಇರುವ ಸಮಾನತೆಯ,ಅದರ ಆಳ ವೈಚಾರಿಕತೆಯ,
ತತ್ವವನು ಅರಿತ ಸಾಮಾನ್ಯರ ಸರ್ವಜ್ಞ.
ಇರುವನಿನ್ನೊಬ್ಬ ನಾವಿಕ ಬಹುದೂರ ಆಗಸದ ಮೇಗಡೆ
ಮಂತ್ರಮುಗ್ದ ಮಾಡುವ ಮಾಂತ್ರಿಕ
ಅವನು ಬದುಕಿನ ತೆಪ್ಪವ.
ಇತ್ತ ತಿರುಗಿಸುತಲಿದ್ದರೆ ಜೀವನ,
ಅತ್ತ ತಿರುವಿದರೆ ಕಷ್ಟ ಕಾರ್ಪಣ್ಯದ ಪ್ರಪಾತ.
ನಗರದಿಂದ ಮನೆಯೆಡೆಗೆ ತಲಪಿಸುವ ಇಹಲೋಕದ ಈ ನಾವಿಕ,
ತಮ ದಿಂದ ಬೆಳೆಕಿನೆಡೆಗೆ ಬಾಳ ನೌಕೆಯಲ್ಲಿ,
ಕರೆದೊಯ್ಯುವ ಪರಲೋಕದ ಆ ನಾವಿಕ.
ಇಹ ಪರ ಮಧ್ಯೆ ನಾವು ಪಯಣಿಗರು,
ಮನೆ ಮನ ತೊರೆದು ಆತ್ಮ ಜ್ಯೋತಿಯ ಕಡೆಗೆ,
ನಮ್ಮ ವಲಸೆ.
ಪರ್ಯಂತ ಅತ್ಯಂತ ಆಯಷ್ಯಕ,
ಈ ನಾವಿಕರ ಅಭಯ ಹಸ್ತ.
By Divya Viswanath Manoj

Comments