top of page

ಜೀವ ಭಾವ (Kannada)

Aug 29, 2024
1 min read

By Divya Viswanath Manoj


ನೀನು ನಿನ್ನ  ಮೈ ಬಣ್ಣ ಬಿಳಿ ಅಥವಾ ಕಪ್ಪಲ್ಲ 

ನೀನು ಹದಿ ಹರಯ  ಅಥವಾ ಮುಪ್ಪಲ್ಲ,

ನೀನು ಯಾರೊಬ್ಬರ  ಸ್ವಂತ ಇಲ್ಲವೇ ಪರಕೀಯಳೂ ಅಲ್ಲ 

ನೀನಲ್ಲ ಕೇವಲ ಹುರುಳಿಲ್ಲದ ಬಾಹ್ಯ ರೂಪ.

ನೀ ಮಾತೃ ನೀ ಪಿತೃ,ಭಗಿನಿ,ಭ್ರಾತೃ

ಮಾತ್ರವಲ್ಲ.

ನೀನು ನಿನ್ನ ಅಂತರಂಗದ ಕನ್ನಡಿ.

ನೀನು ಬರೀ ಚಂದದ  ಹೆಸರಷ್ಟೇ ಅಲ್ಲ 

ನಗುವಾಗ ಕೆನ್ನೆಯ ಮೇಲೆ ಬೀಳುವ ಗುಳಿಮಾತ್ರವಲ್ಲ  

ನೀನು ಆ ನಗುವಿನ ಹಿಂದೆ ಬಚ್ಚಿಟ್ಟ ಕಣ್ಣೇರಿನ ಕಡಲು

ಅದೇ ಕಂಬನಿಯ ಪೂರವು ಹರಿಯುತಲೇ ,ನೀ ಅನ್ಯರಿಗೆ ನೀಡುವ ಮಮಕಾರದ ಮಡಿಲು

ಮಧುರವಾಗಿ ಕೇಳಿಬರುವ ನೀ ಸುಪ್ರಭಾತದ ಧ್ವನಿಯಾದರೆ

ಹೃದಯದಲ್ಲಿ ಅಡಗಿ  ಹೂತಿರುವ ಮೊರೆಯ  ಹೂಂಕಾರ ನೀನು.

ಸ್ಥೈರ್ಯದ ಹಗ್ಗದ ಮೇಲೆ ನೊವ್ವಿನ ಕಣಿವೆ ದಾಟಿಬಂದ ಆ ನಗುವಿನ  ಝೇಂಕಾರ ನೀನು.

ನೀನು ಅಸ್ತಿತ್ವವೇ ಇರದ ಹಸಿ ಮಾಂಸದ ಚೂರಲ್ಲ 

 ವ್ಯಕ್ತಿತ್ವವಿರುವ ಬಿಸಿ ರಕ್ತದ,ಕನಸು ಹೊತ್ತ ಕಾರಂಜಿ ನೀನು.

ಬಾಳೆಂಬ ಉರಿಬೇಕಿಯಲಿ ಬೆಂದು,

ಕಲ್ಮಶಗಳ  ತೊರೆದು,

ಭೀತಿ ದುಮ್ಮಾನಗಳ ಪೊರೆಯ ಕಿತ್ತೆಸೆದು 

ಹೊರಬಂದ  ಅಪರೂಪದ ಅಪರಂಜಿ ನೀನು.

ಗೆದ್ದರೆ ಆ ಹೆಗಲು ಹೊರಲಾರದಷ್ಟು ಮತ್ತಷ್ಟು ಹೊರೆಯ ಆ ಕೊರಳಿಗೆ ಬಿಗಿದು 

ಪದವಿಗಳ ಪೀಠದಿಂದ ಕೆಳಗಿಳಿಯದ ಹಾಗೆ ಶೂಲಕ್ಕೇರಿಸುವರು

ನೀ  ಸೋತರೆ  ಕುಟುಂಬವೇ  ನಿರ್ನಾಮಯೆನ್ನುವರು 

ಎಲ್ಲರ ಸೋಲು ನೀನು ಒಪ್ಪಿ ಅಪ್ಪುವೆ 

ಅದು ನಿನ್ನ ಮಮಕಾರ  

ಆದರೆ  ನಿನ್ನ ಸೋಲು ಯಾರ ಪಾಲಿಗೆ?

ಅಲ್ಲಿ ಇಲ್ಲಿ,ಆಗೊಮ್ಮೆ, ಈಗೊಮ್ಮೆ 

ಮಾತೃತ್ವದ ಸ್ನೇಹ ಸಿಂಚನ 

ಅದೇ ಮುನ್ನಡೆಯಲು ತನು ಮನಕ್ಕೆ ಪುಷ್ಟಿಕೊಡುವ  ಪೇಯ.

ಯಾವಾಗಲೂ,

ನೀ ಗೆಲುವು, ನೀನೇ  ಸೋಲಲ್ಲ 

ಸದಾ, ಸಂಭ್ರಮದ ಮೂಲವು ,ಸಂತಾಪದ ಸೂಚಕವೂ ನೀನಲ್ಲ 

 ಪರಿಪೂರ್ಣತೆಯ ತೂಕ ತೂಗಿ  

ನಿನಿಗಾಗಿ ಸರಳವಾಗಿ ಜೀವಿಸಲು ತಡಕಾಡಬೇಕಿಲ್ಲ  

ಸಮ್ಮತಿಯ ಹುಡುಕಾಡಿ 

ನೀನು ನೀನಾಗಿರಲು 

ಅನಸಿಕೆ, ಅನುಮತಿಗಳ 

ಸರಪಳಿಯ ಹಿಮ್ಮಡಿಗೆ ಸುತ್ತಿಕೊಂಡು 

ಆತ್ಮವನ್ನು ಎಳೆದಾಡಬೇಕಿಲ್ಲ 

ನೀನೊಂದು ಜೀವ

ಮನದ ಮಿಡಿತ

ಹೃದಯ ತುಡಿತ

ಎದೆಯ ಬಡಿತವಿರುವ

ಒಂದು  ಭಾವ.


By Divya Viswanath Manoj

Recent Posts

See All
Moonlit

By Alia Gupta The moon shines bright. As the daughter of Hecate herself, dreams of her beloved She rustles his gentle hair His heartbeat...

 
 
 
The Escape

By Alia Gupta It's all a haze; she sits down with grace, The world quiets down, Muffled voices, blurry all around The rhythm of her heart...

 
 
 
The Definition

By Alia Gupta She was thirteen. She didn't know what love was. She had heard about it. Might have seen it. So, she searched for it. But a...

 
 
 

Comments

Rated 0 out of 5 stars.
No ratings yet

Add a rating
bottom of page