ಜೊತೆಗಿರುವ ದೆವರುಗಳು…..
By Naveen S Undri
ಜನ್ಮ ನೀಡಿದ ಜನುಮದಾತರ ಅರೆ ಘಳಿಗೆ ಸ್ಮರಿಸುವಾಸೆ
ಪದದಿ ವರ್ಣಿಸಲಾಗದ ಇವರ ಮನದಿ ಪೂಜಿಸುವಾಸೆ
ನಮ್ಮ ಮೊದಲ ಅಳುವಿಗೆ ಖುಷಿಯಾದರು
ಮತ್ತೆ ಅತ್ತಾಗ ಸಂಕಟ ಪಟ್ಟವರು
ತೊದಲು ನುಡಿ ಕೇಳಿ ದೃಷ್ಟಿ ತೆಗೆದರು
ಪ್ರತಿ ಕ್ಷಣವೂ ಕಣ್ಣಂಚಿನಲ್ಲಿ ಕಾಪಾಡಿದವರು
ನಮ್ಮ ನಗುವಲಿ ತಮ್ಮ ದುಃಖ ಮರೆತವರು
ಎಲ್ಲ ಕಹಿಯ ನುಂಗಿ ಸಿಹಿಯ ಉಣಬಡಿಸಿದರು
ಹುಸಿಕೋಪದಿ ಗದರಿ ತಿಳಿ ಹೇಳಿದವರು
ಮೇಣದಂತೆ ಕರಗಿ ಬೆಳಕ ನೀಡಿದರು
ನಮ್ಮ ಗೆಲುವನ್ನು ಸಂಭ್ರಮಿಸಿದವರು
ಸೋತು ಕುಗ್ಗಿದಾಗ ಧೈರ್ಯ ತುಂಬಿದರು
ಲೋಕಕ್ಕೆ ನಮ್ಮನ್ನು ಪರಿಚಯಿಸಿದವರು
ತಮ್ಮ ಪರಿಚಯವವ ನಮಗಾಗಿ ಮರೆತರು
ಇವರ ನೀಡಿದ ದೇವರಿಗೆ ನನ್ನ ಧನ್ಯವಾದ....
ಈ ತ್ಯಾಗ ಮೂರ್ತಿಗಳ ಕಂಡು ಅವನು ಬೆರಗಾದ....
By Naveen S Undri

Comments