ಗಜಮುಖ….
By Naveen S Undri
ಭಾದ್ರಪದ ಶುಕ್ಲದ ಚೌತಿಯ ಈ ದಿನ
ಮನೆ ಮನಗಳಿಗೆ ವಿನಾಯಕನ ಆಗಮನ
ಗಜಾನನನ ಸ್ವಾಗತಕ್ಕೆ ಧರೆಯು ಕಾದಿರಲು
ಆ ದೇವನ ಸ್ತುತಿಸಲು ಎಲ್ಲರೂ ಒಕ್ಕೊರಲು
ಗೌರಿಯ ಕಂದ ನಮ್ಮೀ ಆದಿಪೂಜೆಯ ಅಧಿಪತಿ
ಕಷ್ಟಗಳ ದೂರಮಾಡೋ ಸಂಕಷ್ಟಹರ ಗಣಪತಿ
ತಾಯಿ ಆಜ್ಞೆಗೆ ಪರಶಿವನ ಎದುರಿಸಿದವನು
ತಂದೆ ತಾಯಿಯ ಸುತ್ತಿ ಮುಲ್ಲೋಕ ಎಂದವನು
ವಿದ್ಯೆಬುದ್ಧಿಯ ಒಡೆಯ ಈ ಮಹಾಭಾರತದ ಲೇಖಕ
ತಪ್ಪಿಗೆ ಶಪಿಸಿ ಮತ್ತೆ ಕರುಣಿಸಿದ ಚಂದ್ರಮಗೆ ಬೆಳಕ
ಭಕ್ತರ ಪಾಲಿನ ಭರವಸೆಯು ಈ ನಮ್ಮ ಗಜಾನನ
ಭಯದಿ ನೆನೆದಾಗ ಜೀವಕ್ಕೆ ಏನೋ ಸಮಾಧಾನ
ಪೂಜೆ ಸ್ವೀಕರಿಸಿ ಆಶೀರ್ವದಿಸಲು ಬರುತಿಹನು ಮೂಷಿಕ ಸವಾರ....
ಪ್ರಸಾದ ಸೇವಿಸಲು ಬಹುಶಃ ಮೋದಕ ಪ್ರಿಯನಿಗೂ ಆತುರ..
By Naveen S Undri

Comments