ಓ ಒಲವೆ ಇಲ್ಲಿ ಕೇಳು
- Hashtag Kalakar
- Apr 29, 2023
- 1 min read
By Vani V
ಓ ಒಲವೇ ಇಲ್ಲಿ ಕೇಳು,
ಮರುಭೂಮಿಯ ಮರೀಚಿಕೆಯಂತೆ
ಕಂಡರೂ ಕಾಣದ ಹಾಗೆ...
ನೀ ಇರುವುದೇಕೆ...
ಹಲಸಿನ ಹಣ್ಣಿನಂತೆ
ಒಳಗೆ ಮೃದುವಾಗಿದ್ದರೂ....
ನೀ ಚುಚ್ಚುವುದೇಕೆ...
ಒಲೆಯಲ್ಲಿನ ಕೆಂಡದಂತೆ
ನೋಡಲು ಸುಮ್ಮನಿದ್ದರೂ....
ಮುಟ್ಟಿದಾಗ ಸುಡುವುದೇಕೆ......
ಗೋಡೆಯ ಮೇಲಿನ ದೀಪದಂತೆ
ಹೊಳೆಯುತ್ತಿರುವಾಗ ನೀನು...
ನನ್ನನ್ನು ಕಂಡಾಗ ಮಾಂಕಾಗುವುದೇಕೆ
ಮನಸ್ಸಿನಲ್ಲಿ ರಾತ್ರಿಯ ಚಂದ್ರನಂತೆ
ಮಿನುಗುವ ನೀನು....
ಹಗಲಾದರೆ ಕಣ್ಮರೆಯಾಗುವೆ ಏಕೆ.....
ಕಾಲವು ನಿಧಾನವಾಗಿ ಕಳೆದಂತೆ
ಒಂದು ದಿನ ನಾನೂ ಸಹ ಕಳೆದು ಹೋಗುವೆ......
ನಾನು ಹೋದಮೇಲೆ ಖುಷಿಯಾಗಿರು ಜೋಕೆ....
By Vani V

Comments