ಅಜ್ಜಿ ಮನೆ
By Sahana Joshi
ನಮ್ಮ ಅಜ್ಜಿ ಮನೆ ಸವದತ್ತಿ |
ಹೋಗ್ತಿದ್ವಿ ನಾವು ಗುಡ್ಡ ಹತ್ತಿ ||
ಹಿತ್ತಲದಾಗ ಬಿಡ್ತದ್ದು ಮಲ್ಲಿಗಿ, ಡೇರೆ ,ಗೊರಟಿಗೆ ಹುವಾ |
ನಾವು ಅವನ್ನ ಹರದಾಗೊಮ್ಮೆ ಅಜ್ಜಿ ಹೇಳಕಿ ಹರಿ ಬ್ಯಾಡ್ರವಾ||
ಬೆಳೆಸಿದ್ಲು ಅಜ್ಜಿ ಮೆಣಸಿನಕಾಯಿ, ಕರಿಬೇವು ,ಕೊತಂಬರಿ ಗಿಡ |
ಮಾಡತಿದ್ಲು ಅದನ್ನ ಹಾಕಿ ನಮಗ ಜೋಳದ ವಡ||
ಡಬ್ಯಾಗ ಇಟ್ಟಿರ್ತಿದ್ಲು ಚುರುಮುರಿ ಹಚ್ಚಿ |
ತಿನಲ್ಲಿಕ್ಕೆ ಕೋಡತಿದ್ಲು ಅದಕ್ಕೆ ಸೌತಿಕಾಯಿ ಕೊಚ್ಚಿ ||
ಮರದಿಂದ ಹರಕೊಂಡ ಬರತ್ದ್ವಿ ಮಾವಿನಕಾಯಿ ಇಲಾಯಿಚಿ|
ತಿನ್ನಕೊತ ತಿನ್ನಕೊತ ಆಡತಿದ್ವಿ ಚಕ್ಕಾವಚ್ಚಿ||
ನಮ್ಮ ಅಜ್ಜಂದ ಇತ್ತು ಹನುಮಪ್ಪನ ಗುಡಿ |
ಪುಜಾಕ ಹೋಗ್ರಿ ಅಂತ ಮಾಡತಿದ್ಲು ಅಜ್ಜಿ ಗಡಿಬಿಡಿ ||
ಹಣುಮ ಜಯಂತಿಗೆ ಹಾಕ್ಕೊತಿದ್ವಿ ಹೊಸಾ ಬಟ್ಟಿ |
ಎಲ್ಲಾರಗೂ ಕೊಡತಿದ್ವಿ ಪ್ರಸಾದ ಚೀಟಿದಾಗ ಕಟ್ಟಿ ||
ಮತ್ತ ಊರಿಗೆ ವಾಪಸ ಹೋಗ್ಲಿಕ್ಕೆ ಆಗತ್ತಿತು ಬ್ಯಾಸರಾ|
ಸಾಲಿ ಶುರು ಆಗ್ತದ ನಡಿ ಅಂತ ಕರಕೊಂಡು ಹೋಗತ್ತಿದ್ಲು ಅಮ್ಮ ಸರಸರಾ ||
By Sahana Joshi

Comments