ಅಂದದ ಚಂದದ ಬಳೆ
By Sahana Joshi
ಕಿಣಿಕಿಣಿ ನಾದವ ಮಾಡುತ್ತ ಸುಂದರ ಬಳೆ|
ಎಲ್ಲರನ್ನು ಸೆಳೆಯುವ ತನ್ನತ್ತ ಈ ಬಳೆ ||
ಮುತೈದರಿಗೆ ಐದು ಮುತ್ತುಗಳಲ್ಲಿ ಒಂದು ನೀನು|
ಮದುಮಗಳ ಅಲಂಕಾರಕ್ಕೆ ಭೂಷಣ ನೀನು||
ಅಮ್ಮನ ಬಳೆಗಳ ಸದ್ದು ಕೇಳಲು ಕಂದಮ್ಮನಿಗೆ ಆನಂದ|
ಅವಳ ಬಣ್ಣ ಬಣ್ಣದ ಮಿಣಿ ಮಿಣಿ ಮಿಂಚುವ ಬಳೆಗಳು ಚಂದಕಿಂತ ಚಂದ||
ಹಬ್ಬಗಳಿಗೆ ತೊಡಿಸುವರು ಹೊಸ ಬಳೆ|
ಕೈತುಂಬ ಬಳೆಗಳು ಇದ್ದಾಗಲೆ ಹಬ್ಬಕ್ಕೊಂದು ಕಳೆ||
ಹಸಿರು, ಕೆಂಪು, ಗುಲಾಬಿ ಹಲವಾರು ಬಣ್ಣಗಳ ಗಾಜಿನ ಬಳೆಗಳು|
ಅವುಗಳ ಮಧ್ಯ ರಾರಾಜಿಸುವುದು ಚಿನ್ನದ ಬಳೆಗಳು||
ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವುದು ಬಳೆ|
ಮಹಿಳೆಯರಿಗೆ ಹೆಮ್ಮೆಯ ಆಭರಣವೆ ಬಳೆ||
By Sahana Joshi

Comments