By Gowri Bhat
ಹಸಿರು ಸಿರಿಯ ಮಲೆನಾಡು
ಈ ಹಸಿರು ಹುಲ್ಲಿನ ಮಡಿಲಲಿ
ಹಚ್ಚ ಹಸಿರು ವನಸಿರಿ ನಡುವಲಿ
ತುಂಬಿ ತುಳುಕಿದೆ ನದಿ ಕೆರೆಗಳಿಲ್ಲಿ
ಸ್ವರ್ಗ ಸಿರಿಯ ಸೌಂದರ್ಯವ ನೋಡಿಲ್ಲಿ
ಮಲೆನಾಡೆ ಭೂಲೋಕದ ಸ್ವರ್ಗವು
ಮಲೆನಾಡೆ ಭೂಲೋಕದ ಸ್ವರ್ಗವು
ಇಬ್ಬನಿಯ ವನರಾಶಿಯ ನಡುವಲಿ
ಮಂಜಿನ ಚುಮು ಚುಮು ಚಳಿಯಲಿ
ಮಲೆನಾಡೇ ನಿಸರ್ಗದ ಶೃಂಗಾರವಿಲ್ಲಿ
ಕಣ್ಮುಂದೆ ನಿಂತು ಮೋಹ ಉದಿಸಿದೆ ಎನ್ನಲ್ಲಿ
ಮಲೆನಾಡೆ ಭೂಲೋಕದ ಸ್ವರ್ಗವು
ಮಲೆನಾಡೆ ಭೂಲೋಕದ ಸ್ವರ್ಗವು
ಹಸಿರಿನ ನಡುವೆ ಬಣ್ಣದ ಲೋಕವಿಲಿ
ಪುಷ್ಪ ರಾಶಿಯು ಎಲ್ಲೆಡೆ ಅರಳಿದೆಯಿಲ್ಲಿ
ಕಾಡಿನ ನಡುವೆ ಹುವ್ವಿನ ವೃಕ್ಷಗಳಿಲ್ಲಿ
ಪುಷ್ಪರಾಶಿಯಿಂದ ಭೂರಮೆಯು ಕಂಗೋಳಿಸಿದೆಯಿಲ್ಲೀ
ಈ ಮೆರಗು ಮನಸ್ಸಿಗೆ ಮುದ ನೀಡಿದೆಯಿಲ್ಲಿ
ಮಲೆನಾಡೆ ಭೂಲೋಕದ ಸ್ವರ್ಗವು
ಮಲೆನಾಡೆ ಭೂಲೋಕದ ಸ್ವರ್ಗವು
By Gowri Bhat
Comments