ತುಳಸಿ
By Sahana Joshi
ಮನೆಯ ಮುಂದೆ ಬೆಳೆಸಬೇಕು ಪವಿತ್ರವಾದ ತುಳಸಿ।
ದಿನನಿತ್ಯ ಪೂಜಿಸಬೇಕು ರಂಗೋಲಿ ಹುವೂಗಳಿಂದ ಅಲಂಕರಿಸಿ ॥
ಲಕ್ಷ್ಮೀ ದೇವತೆಯ ಸಂಕೇತ ಈ ತುಳಸಿ।
ವಿಷ್ಣುವಿನ ಪ್ರಧಾನ ಪತ್ನಿ ಶ್ರೀ ತುಳಸಿ ॥
ಗುರುವಾರ ಶುಕ್ರವಾರದಂದು ತುಳಸಿ ನೆಟ್ಟರೆ ಅದು ಮಂಗಳಕರ ।
ಮನೆಯಲ್ಲಿ ಸಂತೋಷ ಸಮೃದ್ದಿ ಆಗುವುದು ಅಪಾರ॥
ಕಾರ್ತಿಕ ಮಾಸದ ದ್ವಾದಶಿಯಂದು ಮಾಡುವರು ತುಳಸಿ ವಿವಾಹ ।
ನೆಲ್ಲಿ, ಹುಣಸೆ ಟೊಂಗೆಯಿಂದ ಶೃಂಗರಿಸುತ್ತಾರೆ ವಿಧ ವಿಧ ತರಹ ॥
ಸಸ್ಯಕಾಶಿಯಲ್ಲಿ ತುಳಿಸಿ ದೇವಿಯು ಶ್ರೇಷ್ಠಳು।
ಅವಳು ಶುಭಳು ,ಆಸೆಗಳನ್ನು ಈಡೆರಿಸುವಳು ,ಶ್ರೀ ಕೃಷ್ಣನಿಗೆ ಪ್ರೀಯಳು॥
ಆತ್ಮ ಮತ್ತು ಮನಸ್ಸಿನ ಶುದ್ಧಿಗಾಗಿ ಧರಿಸುವರು ತುಳಸಿ ಮಾಲೆಯನ್ನು।
ದೂರವಿಡುವುದು ಈ ಮಣಿ
ದುಷ್ಠಶಕ್ತಿ ಮತ್ತು ದುಃಸ್ವಪ್ನಗಳನ್ನು॥
ಹಲವು ಔಷಧಿಗಳಿಗೆ ನಿತ್ಯ ಬಳಕೆಯಾಗುತ್ತದ ಪರಿಮಳ ಹೊಂದಿರುವ ಈ ಎಲೆ।
ಭಾರತದಲ್ಲಿ ಉನ್ನತವಾಗಿದೆ ತುಳಸಿ ದೇವಿಯ ಧಾರ್ಮಿಕ ಬೆಲೆ॥
ಯಾರು ದಿನ ನಿತ್ಯವು ಆರಾಧಿಸುವರೊ ತುಳಸಿ ಮಾತೆಯನ್ನು।
ಅವರೆಲ್ಲರು ಪಡೆಯುವರು ಆಯುರಾರೋಗ್ಯವನ್ನು॥
By Sahana Joshi

Comments