ನೀನು
By Supriya S
ನನ್ನ ಸ್ಥಾನ
ನಿನ್ನ ಮನಸೊಳಗಿದ್ದರು
ನಿನ್ನ ಮನೆಯಲಿಲ್ಲ
ನಿನ್ನ ಜೀವನ ನಾನಾದರೂ
ನನ್ನ ಜೀವನದಲ್ಲಿ ನೀನಿಲ್ಲ
ನಿನ್ನ ಹಾತೊರಿಕೆಯಲಿ ನಾನಿದ್ದರು
ನನ್ನ ಜೀವನ ಹಾದಿಯಲ್ಲಿ ನೀನಿಲ್ಲ
ನಿನ್ನ ಜೊತೆ ನಡೆದಾಡಿದರು
ನೀನೊಟ್ಟಿಗಿಲ್ಲ ನಾ
ನಿನ್ನ ಮಮತೆಯಲಿದ್ದರು
ಮದುವೆಯ ಮೆರವಣಿಗೆಯಲಿಲ್ಲ
ಮನದ ಸಂಗೀತವಾದರೂ
ಜೀವನದ ಶೃತಿಯಲಿಲ್ಲ
ನನ್ನಲೆಲ್ಲವೂ ನೀನಿದ್ದರೂ
ನೀ ನನ್ನ ಜೀವನದಲಿಲ್ಲ
ಸಲಿಗೆಯ ಸನಿಹವಾದರೂ
ಸಮ್ಮತಿಯ ಸೂಚನೆಗಳಿಲ್ಲ
ನೀನು ಗೆಳೆಯನೂ
ಗೆಳೆತನವ ಮೀರಿದ ಒಲವೂ ತಿಳಿದಿಲ್ಲ
ಗೆಳೆಯನೆನಲು ಮನ ಒಪ್ಪುತ್ತಿಲ್ಲ
ಪ್ರಿಯತಮನೆನ್ನಲು ಸೂಚನೆಗಳಿಲ್ಲ
ಆದರೂ ಮನ ನಿನಗಾಗಿ ಮಿಡಿಯುತಿದೆಯಲ್ಲ....
By Supriya S

Good one
🙏🙏🙏
Nice
Nice
👍 nice