ಹೃದಯದ ಮಾತು
By Sharath Chandra M N
ಜೋರಾಗಿ ಬಡಿಯುತ್ತಿದ್ದ ಹೃದಯ ನಿನ್ನ ನೋಡಿದಾಕ್ಷಣ|
ಬಡಿಯುವುದೇ ಮರೆತಂತಿದೆ ಇಂದು ನಿನ್ನ ನೆನೆದಾಕ್ಷಣ||
ಗಾಜಿನ ಚೂರಿನ ಗಾಯ ಮಾಗುವುದು ಬೇಗ|
ಚೂರಾದ ಹೃದಯದ ಗಾಯ ಮಾಗದು ಆದರು ಯುಗ||
ಮಳೆಯಿಂದ ರಕ್ಷಣೆಗೆ ನಿಂತೆ ನಾ ಮರದ ಕೆಳಗೆ|
ಆದರೂ ನೆನೆದೆ ತಿಳಿಯದೇ ನಾ ನಿಂತಿದ್ದು ನಿನ್ನ ನೆನಪಿನೊಳಗೆ||
ದೇವರ ಮೊರೆ ಹೋದೆ ಕಾಪಾಡು ನೀ ಎಂದು|
ಆತನೂ ಕೈ ಚೆಲ್ಲಿದ ಅನುಭವಿಸು ನೀ ಎಂದು||
By Sharath Chandra M N

Comments