ಹೆಣ್ಣು
- Hashtag Kalakar
- Sep 4, 2023
- 1 min read
Updated: Jul 30
By M S Indira
ಮಮತೆಯ ಮಗುವಾಗಿ ಹೆಣ್ಣು
ಮಡಿಲ ತುಂಬಿ ನಕ್ಕು ನಗಿಸಿ ಬೆಳೆದುಂತೆ.
ಅಕ್ಕಪಕ್ಕದ ವಿಚಾರವನ್ನು
ತಿಳಿದು ಬೆಳೆದು ದೊಡ್ಡವಳಾದಂತೆ
ತನ್ನ ಗುರಿ ಸಾಧಿಸಲು ಹೆಣಗಾಟ
ತನ್ನ ಸಾಧನೆಯಲ್ಲಿ ಮುನ್ನುಗ್ಗಿ
ಬೇರೆ ಮನೆ ಸೇರಿ
ಆ ಮನೆ ಬೆಳೆಗಲು ಸಹಕರಿಸಿ
ಮಗುವಾಗಿ ತಾಯಿಯ ನಗಿಸಿ
ದೊಡ್ಡವಳಾಗಿ ಮನೆಯ ದೀಪಬೆಳಗಿಸಿ
ಪ್ರೌಡವಸ್ತೆಯಲ್ಲಿ ಬೇರೆ ಮನೆ ಸೇರಿ
ಹಿರಿಯಳಾಗಿ ವ್ಯವಸ್ತಿತ ಜವಾಬ್ದಾರಿ ತೆಗೆದುಕೊಂಡು
ಮುದಿತನದಲ್ಲಿ ಎಲ್ಲರ ಏಳಿಗಾಗಿ ಹರಸಿ
ಜೀವನ ಸಾಗಿಸುವ ಇವಳೇ ಹೆಣ್ಣು.
ಮಮತೆ
ಅಂದು ಬೇಸರದಿಂದ ಸುಮ್ಮನೆ ಕುಳಿತಾಗ
ಮನದಲಿ ತೋರಿತೊಂದು ಹೊಸರಾಗ
ಹಾಗೆ ಒಮ್ಮೆ ಹೊರ ಹೊರಟಾಗ
ಆ ಹಸಿರು ಮರ, ಗಿಡ, ಪಾರ್ಕಿನಲ್ಲಿ
ಮಕ್ಕಳ ಆಟಪಾಠ ಆ ತಂದೆ ತಾಯಿಯ
ಮಮತೆಯ ಪ್ರೀತಿ ವಾತ್ಸಲ್ಯ
ಅವರಿಗೆ ಮಕ್ಕಳಾಡುವಾಗ, ಸ್ವರ್ಗವೇ ಸಿಕ್ಕಂತೆ
ಖುಷಿಯಿಂದ ಕೂಗುವ ಹಾಹಾಕಾರ
ಇದೇ ಅಲ್ಲವೇ ಮಮತೆಯ ಮಡಿಲ ಮಮಕಾರ
ಮಕ್ಕಳಿಗೆ ಐಸ್ಕ್ರೀಮ್, ಪಾಪ್ಕಾರ್ನ್. ಎಲ್ಲಾ ಕೊಡಿಸಿ
ಸಂಜೆಯಾಗುತ್ತಲೇ ತಮ್ಮ ಗೂಡುಸೇರುವ ಹಕ್ಕಿಯಂತೆ
ಖುಷಿಯಿಂದಹೋಗುವಸಂಬ್ರಮ.
By M S Indira

Comments