ಸಾಮಾಜಿಕ ಕಳಕಳಿ
By Archana P. Murthy
ಸಾಮಾಜಿಕ ಕಳಕಳಿ ಮನುಷ್ಯನ ಜವಾಬ್ದಾರಿ ಮತ್ತು ಕರ್ತವ್ಯ. ಪ್ರತಿಯೊಬ್ಬರು ಈ ಸಮಾಜ ತಮ್ಮದು ಇದನ್ನು ಕಾಪಾಡುವುದು ನಮ್ಮ ಹೊಣೆ ಎಂದು ಅರಿತು ನಡೆದುಕೊಳ್ಳಬೇಕು.
ಈ ಪದದ ನಿಜವಾದ ಅರ್ಥ ನನ್ನ ಜೀವನದಲ್ಲಿ ನಾನು ಕಂಡುಕೊಂಡಿದ್ದು ಹೀಗೆ.
ಬೆಂಗಳೂರಿನಂತಹ ನಗರವಾಸಿಗಳನ್ನ ಕಾಡುವ ಹಲವಾರು ಸಮಸ್ಯೆಗಳಲ್ಲಿ ನಮ್ಮ ಮನೆಯ ಬಾಗಿಲು ತಟ್ಟಿದ ಸಮಸ್ಯೆ ಕಸದ ವಿಲೇವಾರಿಯದು. ಬೆಂಗಳೂರಿನ ನೂರಾರು ಟನ್ ಕಸ ಸುತ್ತಲಿನ ಹಳ್ಳಿಗಳಲ್ಲಿ ಪರ್ವತರೂಪದಲಿ ಶೇಖರಣೆಯಾಗಿ ಅಲ್ಲಿನ ನೀರು,ಗಾಳಿಯನ್ನು ಕಲುಷಿತಗೊಳಿಸಿ ಜನರ ಆರೋಗ್ಯ ಹದಗೆಡಿಸಿತ್ತು. ಎಚ್ಚೆತ್ತ ಹಳ್ಳಿಯ ಜನ ಕಸ ಹಾಕದಂತೆ ತಡೆಯೊಡ್ಡಿದ್ದರು. ನಗರವಾಸಿಗಳು ಪರಿಹಾರ ತಿಳಿಯದೆ ಕಂಗಾಲಾಗಿದ್ದರು. ಮನೆ, ಬೀದಿಗಳಲ್ಲಿ ಕಸದ ರಾಶಿ ಎಲ್ಲರ ನೆಮ್ಮದಿ ಕೆಡಿಸಿತ್ತು.
ನಮ್ಮ ಕಸ ನಮ್ಮ ಜವಾಬ್ದಾರಿ ಎಂದರಿತ ಸಾರ್ವಜನಿಕ ಸಮುದಾಯ ಕಸ ನಿರ್ವಹಣೆಯ ಕೆಲಸ ವಹಿಸಿಕೊಂಡವು. ಕೆಲವು ಮಹಿಳೆಯರು ಸೇರಿ ಅವರ ಮನೆಗಳಿಂದ ಆರಂಭಿಸಿದ ಈ ಅಭಿಯಾನ ಮುಂದೆ ದೊಡ್ಡ ಬದಲಾವಣೆಗೆ ಮುನ್ನುಡಿಯಾಯಿತು.
ನಗರದ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯ ಕಸ ವಿಲೇವಾರಿ ಮಾಡಲು "ಎರಡು ಬುಟ್ಟಿ ಹಾಗೂ ಒಂದು ಚೀಲ "ದ ಸೂತ್ರ ಅಳವಡಿಸಿ ಕೊಳ್ಳುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಈ ಕೆಲವು ಮಹಿಳೆಯರಲ್ಲಿ ನಾನು ಒಬ್ಬಳು ಎನ್ನುವುದು ನನಗೆ ಬಹಳ ಹೆಮ್ಮೆಯ ವಿಷಯ.
ವಿವಿಧ ಕಾರ್ಯಕ್ರಮಗಳ ಮೂಲಕ ಮನೆ ಮನೆಗೆ ತೆರಳಿ ಜನರಲ್ಲಿ ಕಸ ನಿರ್ವಹಣೆಯ, ವಿಂಗಡಣೆಯ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಆಗ ಬರೆದ ಕೆಲವು ಕವನಗಳು ಹೀಗಿವೆ.
By Archana P. Murthy

Comments