ಶೈಲ ಮತ್ತು ಸವಿತ
By Archana P. Murthy
ಶೈಲ ಮತ್ತು ಸವಿತ ಅಕ್ಕ ತಂಗಿ ಅಂತ ಹರಸಿ ಕಳಿಸಿರುವನು ಭಗವಂತ.
ಕಳೆದಿಹವು ಅವನಿಚ್ಚೆಯಂತೆ ಐವತ್ತು ವಸಂತ.
ನನ್ನ ಪ್ರೀತಿಯ ಪುಟ್ಟ ತಂಗಿಗೀಗ ಐವತ್ತು ತುಂಬಿದ ಸಂಭ್ರಮದ ಜನ್ಮ ದಿನ
ಬರೆಯ ಹೊರಟಿರುವೆ ನಾನೊಂದು ಪುಟ್ಟ ಕವನ.
ನಿರ್ವಹಿಸಿರುವ ಪಾತ್ರಗಳು ಹಲವಾರು
ಹೆಂಡತಿಯಾಗಿ ತಾಯಿಯಾಗಿ ಅತ್ತೆಯಾಗಿ ಅಜ್ಜಿಯಾಗಿ
ಗೆಳತಿಯಾಗಿ ಮಹಿಳೆಯಾಗಿ.
ಬುದ್ಧಿ ಹೇಳಿತು ನೀ ಮಾಡು ಪ್ರೀತಿಯಲಿ ಸಮಪಾಲು
ಹೃದಯ ನೀಡಿತು ತಂಗಿಗೆ ಸ್ಪಲ್ಪ ಹೆಚ್ಚಿನ ಪಾಲು.
ತಂಗಿಯಾಗುವೆ ಒಮ್ಮೆ ತಾಯಿಯಾಗುವೆ ಇನ್ನೊಮ್ಮೆ
ಮಗಳೆನಿಸುವೆ ಒಮ್ಮೆ ಗೆಳತಿಯಾಗುವೆ ಮತ್ತೊಮ್ಮೆ
ನಿನ್ನ ವಾತ್ಸಲ್ಯದ ಪರಿಧಿ ಬಹು ವಿಸ್ತಾರ
ಹೇಗೆ ಬರೆಯಲಿ ನಾನು ಪದಗಳಲಿ ಅದರ ವಿವರ?
ಬದುಕೆಂಬ ಸಾಗರದಲ್ಲಿ ಸಹಜ ಏರಿಳಿತ
ನಮ್ಮಿಬ್ಬರ ಪ್ರೀತಿ ವಾತ್ಸಲ್ಯದ ದೋಣಿ ಸಾಗಲಿ ಅನವರತ.
By Archana P. Murthy

Comments