ಯುಗಾದಿಯ ಶುಭಾಶಯ (Greetings Of Yugadi)
By Dr Praveen Hoogar
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
!!ಸಹಬಾಳ್ವೆಯ ಸತ್ವವನು, ಜೀವನದ ಸತ್ಯವನು
ನಿಸರ್ಗದತ್ತ ದೇಣುಗಳನು ಆದರಿಸಿ, ಆನಂದಿಸಿ, ಆಹ್ವಾದಿಸಿ
ಬೇವು-ಬೆಲ್ಲ ಕೇವಲ ರುಚಿಗಳಷ್ಟೆ ಅಲ್ಲ
ಕಷ್ಟ-ಸುಖ, ಒಳಿತು-ಕೆಡಕು ಅನೇಕ ಅರ್ಥಗಳಿವೆಯಲ್ಲ!!
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
!!ಇರಲೆಬೇಕು ಎರಡೂ, ರುಚಿಗಳನು ತಿಳಿಯಲು ಹಾಗೇ ಸ್ವಾಸ್ಥ್ಯದಿಂದಿರಲು
ಒಂದಕೊಂದು ಒಂದೊಂದು ಗುಣ ವಿಶೇಷವಿಹುದು
ಒಂದರಿಂದ ಮತ್ತೊಂದನು ಅರಿಯಲುಬಹುದು
ಹೆಚ್ಚು-ಕಮ್ಮಿ, ಉಚ್ಚ-ನೀಚ ಭೇದವನ್ನು ತೊರೆ ಸಂತೃಪ್ತಿಯಿಂದಿರಲು !!
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
!!ಸಂವತ್ಸರ ನವನವೀನ ಆಚರಿಸೋಣ
ನಾವು ನಮಗೆ ಅರ್ಪಿಸಿ ಶುಭಕೋರೋಣ
ಬೇಂದ್ರೆ ಕವನ, ಹಾಡ ಕೇಳಿ
ಯುಗ ಯುಗದ ಯುಗಾದಿಯ ಯುಗಳಗಾಥೆ ತಿಳಿ- ಹೇಳಿ!!
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
!!ಚೈತ್ರದಿಂದ ಶುರು ಮಾಡು ಜೈತ್ರಯಾತ್ರೆಯ
ನಿನ್ನನ್ನೆ ನೀ ಗೆದ್ದು ಮಾಡು ಜಾತ್ರೆಯ
ವಸಂತವದು ಹುಟ್ಟುಕಾಲ ಅನೇಕನೇಕಗಳಿಗೆ
ಹೊಸತು ಹುಟ್ಟು ಹೊಳಹು ಬರಲಿ ವಿವೇಕಗಳಿಗೆ!!
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
!!ಸದಾ ಸಂಭ್ರಮ ಸಾರ್ಥಕತೆಯ ಸಾಧಿಸಿ
ಯುಗದ ಆದಿಯಲ್ಲೇ ಸಣ್ಣತನವ ಅಳಿಸಿ
ಸಾರ್ವತ್ರಿಕಗೊಳಿಸಿ ವಿಶ್ವ ಮಾನವತ್ವ ಗಳಿಸಿ
ದಿಗ್ದಿಗಂತವೆಲ್ಲ ಹಂಚಿ ಕೊಂಚ ಕೊಂಚ ಕಳಿಸಿ
ದೀನ ದಿಗ್ಬ್ರಾಂತರನ್ನು ಸೇರಿ ಸಾರಿ ಸಾರಿ ಬೆಳೆಸಿ!!
ಯುಗಾದಿಯ ಶುಭಾಶಯ
ಯುಗದ ಆದಿ ಶುಭಾಶಯ
By Dr Praveen Hoogar

Comments