ನಲ್ಮೆಯ ನಂಟು - Gifted Bond
By Nagendra R.A
ನೀ ದೊರಕಿತ ದಿನ ಒದಗಿತೆನಗೆ ದೊಡ್ಡ ಸುಯೋಗ,
ಆ ಸುಖವನ್ನು ಇಂದಿಗೂ ಮಾಡುತ್ತಿರುವೆನು ಭೋಗ.
ಎನ್ನ ಮನದಿ ವಿಕಾರಪಡಿಸಲಾಗದಾಗಿದೆ ನಿನ್ನ ಗುಂಗ,
ನೀ ಆದೆ ಎನ್ನ ಜೀವನ ಚರಿತ್ರೆಯ ಅವಿಭಾಜ್ಯ ಭಾಗ.
ನಿತ್ಯ ಬಾಳಲ್ಲಿ ಪಡೆ ಹರ್ಷಮಯವಾದ ಅನುಭೋಗ,
ನೋಡಿ ಸುಖಿಪೆ ಅದರ ಫಲವಾದ ನಿನ್ನ ನಗು ಮೊಗ.
ನಮ್ಮ ಅನುಬಂಧಕ್ಕೆ ಯಾವತ್ತಿಗೂ ಬರದಿರಲಿ ಭಂಗ,
ಎಂದೆಂದಿಗೂ ಆಗದಿರಲಿ ಈ ಸಂಗಮದ ವಿಯೋಗ.
ಹಿಂದಿರುಗಿ ನೋಡಲು ಈ ಸ್ಮಿತ ಪಯಣದ ಅನುರಾಗ,
ಭವಿಷ್ಯತ್ತಿನಲ್ಲಿ ನುಡಿವುದು ಭಾವನಾತ್ಮಕ ಮೌನರಾಗ.
ನೀನಿಲ್ಲದೆ ಹೃದಯವಾಗಿದೆ ಒಂದು ಊನವಾದ ಅಂಗ,
ನಿನ್ನ ನೋಡಿದರೆ ಹುಚ್ಚೆದ್ದು ಮನವಾಗುವುದು ಮಂಗ.
ಮರಳಿ ನಿನ್ನ ಮಿಲನ ಪ್ರಾಪ್ತವಾಗುವುದು ಯಾವಾಗ?
ಈ ವಿರಹದ ವೇದನೆಯು ದೂರಾಗಲಿ ಎನಗೆ ಬೇಗ!
Gifted bond
I was blessed with a great luck on the day when I got you,
Am still relishing the happiness obtained from it.
The indulgence of my mind in thinking couldn't be deviated,
You became an inseparable part of the tale of my life.
May you obtain all the peaks of happiness in your life,
I will be glad by looking at your smiling face as a result of it.
Let our relationship do not get any hurdles,
And let this confluence won't get separated.
When this tender grinning journey is looked back,
Silent tune of emotion is played in the future.
Without you my heart has become a non functioning organ,
When I see you - my mind turns into a monkey and dances like a mad .
When could I experience our union again ?
May the pain of this separation fade away at the earliest.
By Nagendra R.A

Comments