ನನ್ನ ಕಂದ
By Vani V
ನವಮಾಸ ಗರ್ಭದಲಿ
ನವಜನ್ಮ ತಾಳುತಲಿ
ಬಳ್ಳಿಯ ಹೂವಂತೆ
ಅರಳುವುದು ಮಗುವು
ತಾಯ್ತನದ ಸೊಬಗನ್ನು
ತಾಯಿಗೆ ನೀಡುತ್ತಾ
ಆನಂದ ಜ್ಯೋತಿಯಂತೆ
ಬೆಳಗುವುದು ಅದರ ನಗುವು
ಪುಟ್ಟ ಕೈಕಾಲುಗಳು
ಶಂಕದಂತ ಕರ್ಣಗಳು
ಮುತ್ತಿನಂತ ಕಂಗಳು
ಮೊಗವೆ ಬೆಳದಿಂಗಳು
ತಾಯಿಯೇ ಮಗುವಾಗಿ
ನಲಿಯುವಳು ಜೊತೆಯಾಗಿ
ಕಂದನನ್ನು ಅಪ್ಪಿ ಬಿಗಿಯಾಗಿ
ಹೇಳುವಳು
ಬಾಳು ಮುದ್ದು ಕಂದ
ನೀ ಮತ್ತೋರ್ವರಿಗೆ ಸ್ಪೂರ್ತಿಯಾಗಿ
By Vani V

Comments