ನನ್ನ ಅಮ್ಮ
By Archana P. Murthy
ಬೆಳಗಾಗೆದ್ದು ಕುಳಿತೆ ಅಮ್ಮನ ನೆನೆಯುತ್ತ ಕಣ್ಣು ಮುಚ್ಚಿ… ಬಗೆಬಗೆಯ ಅಡಿಗೆಯ ಉಣಬಡಿಸುವ ಕೈಗಳಲ್ಲೇ? ನಿನ್ನೆ ಬಂದು ಹೋದ ಮಗಳು ಇವತ್ತೂ ಬರುವಳೇನೊ ಎಂದು ನಿರೀಕ್ಷಿಸುವ ಕಂಗಳಲ್ಲೇ? ಇಳೀ ವಯಸ್ಸಿನಲ್ಲಿಯೂ ಕಂಗೆಡದೆ ಎಲ್ಲ ಕೆಲಸ ನಿಭಾಯಿಸುವ ಮನಸ್ಥೈರ್ಯದಲ್ಲೇ? ಮಕ್ಕಳ ಒಂದು ಪ್ರೀತಿಯ ಮಾತಿಗೆ ಮುದಗೊಳುವ ಮಮತೆಯಲ್ಲೇ?
ಮಕ್ಕಳು, ಮೊಮ್ಮಕ್ಕಳ ಕೀರ್ತಿ ಏಳಿಗೆ ಕಂಡು ಬೀಗುವ ಮುಗ್ಧ ನಗುವಿನಲ್ಲೇ? ಓಂದು ಸಣ್ಣ ಉಡುಗೊರೆಯ ನೂಲಿನ ಸೀರೆಯನುಟ್ಟು ನಲಿವ ವಿಶಾಲ ಮನೋಭಾವದಲ್ಲೇ? ಎಲ್ಲಿದ್ದರೂ, ಹೇಗಿದ್ದರೂ ಮಕ್ಕಳ ಶ್ರೇಯಸನ್ನೇ ಬಯಸುವ ಮೃದು ಹೃದಯದಲ್ಲೇ? ಎಲ್ಲಿ ಹುಡುಕಲಿ ಅಮ್ಮ ನಿನ್ನ ನಿತ್ಯ ನಿರ್ಮಲ ಪ್ರೀತಿಗೆ ಅರ್ಥವ? ಹೇಗೆ ಬರೆಯಲಿ ಈ ಅಧ್ಬುತ ಅನುಭವವ? By Archana P. Murthy

Comments