ನೀ ಮತ್ತೆ ಹುಟ್ಟಿ ಬಾ - Be Born Again
By Stephen Deepak
In Loving Memory of Puneeth
Rajkumar
ದೂರದ ಲೋಕಕ್ಕೆ ನೀ ತೆರಳಿರುವೆ, ಹೋಗಲು ನಿನಗೆ ಮನಸ್ಸಾಯಿತೆ,
ನಿನ್ನ ಬೀಳ್ಕೊಟ್ಟ ಜನರ ಮನಗಳು ಕಂಬನಿಯಿಂದ ಕೂಡಿದೆ.
ಗ್ರಹಿಸಿ ಕೊಳ್ಳಲಾಗದ ಶೋಕ, ಆಪ್ತರೊಬ್ಬರು ಕಳೆದುಹೋದಂತಹ ಭಾಸ.
ಯಾರಿಗೂ ಬೇಡ ಈ ನೋವಿನ ಯಾತನೆ,
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದಂತೆ ಕೈಜಾರಿ ಹೋದೆಯ ಪ್ರೀತಿಯ ರಾಜಕುಮಾರ.
You sojourned to the far abode, how did you make up your mind?
The people you have left behind are in despair and in a hopeless state.
Your death, a fact indigestible, make us feel like one in the family has passed away,
No one must suffer this grief filled agony,
Like the sun that slipped away from the blue sky, is how you left us dear prince.
ಮನೆಯಲ್ಲೊಬ್ಬರು ತೀರಿಕೊಂಡ ಹಾಗೆ, ಆಗುವ ಶೋಕ ಎಲ್ಲೆಲ್ಲೂ ಕಾಣುತ್ತಿದೆ.
ನಮ್ಮ ಮನೆಯ ಅಪ್ಪು , ನಮ್ಮೆಲ್ಲರ ಅಪ್ಪುಗೆಯಿಂದ ದೂರವಾಗಿದ್ದಾನೆ.
ಪುಟ್ಟ ಮಗುವಾಗಿ ನಗುಮುಖದಿಂದ ರಂಜಿಸಿದ ಕಣ್ಮಣಿ ಕಣ್ಮರೆಯಾಗಿದ್ದಾನೆ.
ಕಾಣದಂತೆ ಮಾಯವಾದನು ಎಂದಾಡಿದ ಕುವರ ನಿಜಕ್ಕೂ ನಮ್ಮಿಂದ ಮಾಯವಾಗಿದ್ದಾನೆ.
The sorrow surrounding your death is felt like the death of a dear departed,
Our dearest Appu (Puneeth Rajkumar’s nick name) has gone away far far away from our embrace.
You entertained us from your childhood, now you have disappeared from our sight
Like the way you sang, about the disappearing act, you indeed disappeared from us for ever.
ಕಾರಣವಿದ್ದು ಕಾರಣದಿಂದ ಹೋಗುವರಿಗೆ ಕಣ್ಣೀರು ಗೊತ್ತಾಗಿಯೇ ಬೀಳುವುದು,
ಇಂದಿದ್ದ ಈಗಿಲ್ಲ, ಎಂದು ಕಾರಣವಿಲ್ಲದೆ ಹೋಗುವರಿಗೆ ಕಣ್ಣೀರ ಕೋಡಿ ನಿಲ್ಲುವುದೇ?
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಅರಿಯದ ಹಾಗೆ, ಮೇಜಿನ ಮೇಲಿಂದ ಬೊಂಬೆ ಬಿದ್ದು ಒಡೆದುಹೋಯಿತು.
ಅಗಲಿಕೆಯ ನೋವು ಎಂದೆಂದೂ ಇರುವುದು, ಪ್ರೀತಿಯ ಅಪ್ಪು ನೀ ಮರಳಿ ಬಾ, ನೀ ಮತ್ತೆ ಹುಟ್ಟಿ ಬಾ.
Tears roll knowingly well for those we know are counting their last days,
But for those who die, who were here yesterday and gone today, tears do not stop rolling away.
Like, the doll that was playing on the table swayed and swayed,
Unknowingly, the doll fell down and broke in front of our eyes,
The pain of parting will remain forever long, Dearest Appu (Puneeth’s nickname)
Come again, Be Born again, Be Born again
By Stephen Deepak

Comments