ತಂದೆ ತಾಯಿ.
By Shreeraksha Gururaj Chulki
ಮಗುವಿನ ಮನಕ್ಕಿಂತ, ನಗುವಿನ ಸೂಕ್ಷ್ಮತೆಗಿಂತ
ಮುಗ್ಧ ಈ ಎರಡು ಜೀವಗಳು,
ಕಣ್ ರೆಪ್ಪೆಯ ಕೊನೆಯಂಚಲಿ ಹನಿ ತೂಗುವುದು
ಇವರ ತ್ಯಾಗಮಯಿ ಹೃದಯಕೆ, ಮೃದುವಾದ ಮಾನಕೇ.
ಯೆನ್ನ ತುಟಿಗಳೆರಡು ತಂದೆ ತಾಯಿಯೆಂದು ನುಡಿದರೆ ಅಷ್ಟೇ ಸಾಕೆ?
. ಈ ಜೀವಗಳ ಪ್ರೀತಿಸಲು ಕಾರಣ ಬೇಕಿಲ್ಲ,
ಈ ಜಗವನು ತಾಳ್ಮೆಯ ಬತ್ತಿಯ, ಕರುಣೆಯ ಎಣ್ಣೆಯಲಿ ಹಚ್ಚಿದಿರಿ
ನಿಮಗೆ ಸಾಟಿ ಬೇರೊಬ್ಬರಿಲ್ಲ.
ಸದಾ ಹಡೆದ ಜೀವಗಳಿಗೆ ರುಣಿಯಾಗಿರಬೇಕು ನಾವು ನೀವೆಲ್ಲ.
. ಅಳುವ ಕಂದಮ್ಮ ನಗು ಕಂಡಿತು
ತಾಯಿ ಮಡಿಲಲಿ,
ಆಸೆಯ ಗಂಟನು ಅಪ್ಪ ಇಲ್ಲವಾಗಿಸಿದನು
ತನ್ನ ದುಡಿಮೆಯಲಿ,
ಈ ಜೀವಗಳ ನೋಡಿ ರಚನೆಯಾಗಿದ್ದೇ ಸ್ವರ್ಗದ ಕಲ್ಪನೆ,
ಕಥೆಯಲಿ ಬರುವ ಮಹಾರಾಜ ನನ್ನ ಅಪ್ಪನೇ.
.. "ಪೆಟ್ರೋಲ್ ಬೆಲೆ ಏರಿಕೆ"
ಎಂಬುದು ಮಕ್ಕಳ ಶಾಲೆಗೆ ತಡವಾಗಿಸಿಲ್ಲ,
"ದಿನಸಿ ದರ ಆಕಾಶದೆತ್ತರಕೆಂಬ ಸತ್ಯ
ಊಟ ಮಾಡುವಾಗ ಹೊರಬರಲಿಲ್ಲ,.
. ಸಾಕೆಂದರೂ ಬೇಕೆನ್ನುವ ಪ್ರೀತಿ,
ಭಯ ಪಟ್ಟರು ಕಡಿಮೆಯಗದ ಮಮತೆ
ಎಲ್ಲ ದೊರೆತಿರುವಗ,
ಬೆಲೆ ತೆತ್ತಲಾರದ ಪದಗಳಿಗೆ ನಾ ಅರ್ಜಿ ಹಾಕಿರುವೆ.
.. ಹಾರುವ ಹಕ್ಕಿಯ ಹಿಂದೆ ಹಡೆದ ಜೀವಗಳಿರುವುವು,
ನಗುವ ಮಗುವ ನೋಡಿ ಅವರು ನೋವ ಮರೆವರು.
. ನಾ ಮುಂದು ತಾ ಮುಂದು ಎಂದು ಉರುಳುತಿರುವ ಈ ಸಮಯದಲಿ
ತಂದೆ ತಾಯಿ ಯೆಂಬ ಜೀವಗಳೆರಡು ಮಾತ್ರ
ನಗುವಿನ ಹಿಂದೆ ಅನುಭವದ ಕಾರಣ ದಂಡೆಯಲಿ
ಮಕ್ಕಳ ಸಂತೋಷ ನೋಡಿ ಕಣ್ತುಂಬಿಸಿಕೊಳ್ಳುವರು
By Shreeraksha Gururaj Chulki

Comments