ಕಸವಲ್ಲ ನಾನು
By Archana P. Murthy
ಕಸ ಕಸವೆಂದು ಎಸೆಯದಿರಿ ನನ್ನ
ಸ್ವಲ್ಪ ವಿಂಗಡಿಸಿ ಸ್ವಲ್ಪ ಸಹಕರಿಸಿ
ಕಸವಲ್ಲ ನಾನು
ಸಸ್ಯ ಸಂಕುಲದ ಸತ್ವ ನಾನು
ನಿಮ್ಮ ಮನೆ ಅಂಗಳದ
ಹಸಿರಾಗಬಲ್ಲೆ ನಾನು
ಸ್ವಚ್ಛ ನಿರ್ಮಲ ಪರಿಸರದ ಉಸಿರಾಗಬಲ್ಲೆ
ಕಸವಲ್ಲ ನಾನು
ಹಸಿರು ನಾನು ಉಸಿರು ನಾನು
ರಸಗೊಬ್ಬರ ನಾನು
ಸ್ವಲ್ಪ ವಿಂಗಡಿಸಿ ಸ್ವಲ್ಪ ಸಹಕರಿಸಿ
ಮನೆ ಮನೆಯಲ್ಲೂ ಗೊಬ್ಬರ ತಯಾರಿಸಿ
ಗಿಡವ ಬೆಳೆಸಿ.
ಜಗವ ಉಳಿಸಿ.
By Archana P. Murthy

Comments