ಕಲಿಯುಗದ ಅವಾಂತರ ಕೃಷಿಯೆಡೆಗೆ
- Hashtag Kalakar
- May 11, 2023
- 1 min read
By Gurusiddeshwar M Badiger
ಅಡಿಪಾಯದ ಅಡ್ಡಿಗೆ
ಪೈರುಗಳು ಅಳಿದಿವೆ
ಬದುಕಿನ ಬವಣೆಯ ತಪ್ಪಿಗೆ
ಕಟ್ಟಡಗಳು ಬೆಳೆದಿವೆ
ಬೆಳೆದಿರುವ ಮಹಡಿಗಳ
ಕೊರಗಿನ ಕುರುಹುವಿಗೆ
ಕಲಿಯುಗದ ಅವಾಂತರವು
ಕೃಷಿಯ ಭೂಮಿಗೆ
ಕುಂಟೆಯು ಕೂತಿದೆ
ಕೂರಿಗೆ ಮಲಗಿದೆ
ವಿದ್ಯುತ್ತಿನ್ಯಂತ್ರಗಳು ಜೀಕಿವೆ
ಜೀಕಿ ಜಿಗಿಯುತಿವೆ
ತಣಿದಿದೆ ಮಣ್ಣು ಗೊಬ್ಬರಕೆ
ರಭಸದಿ ಸುಡುತಿದೆ ರಸಗೊಬ್ಬರಕೆ
ಭೂತಾಯೊಡಲ ನಾಟುತಿದೆ
ಬಸಿರಲಿ ರಕುತವು ಸೂಸುತಿದೆ
ವೃಕ್ಷವು ಅಲಕ್ಷ್ಯವಾಗಿ
ಮಳೆಯು ಮಾಯವಾಗಿ
ಫಲದ ಮಣ್ಣು ಮಡಿದು
ಪಾದದಡಿಗಿನ ರಸ್ತೆಗಳಾಗಿವೆ
ನೀರಿಲ್ಲದೆ ಮೇವಿಲ್ಲದೆ
ದಣಿವಿಲ್ಲದೆ ಪಶುಗಳು
ಕಸಾಯಿಖಾನೆ ತಟ್ಟುತಿವೆ
ಕೊರಳಲಿ ನೆತ್ತರ ಹರಿಸುತಿವೆ
ಕೆಸರು ಕೊಸರಿ ಕಾವಾಗಿ
ಬಣ್ಣದಂಗಡಿಯ ಹಸಿರು
ಮನೆಯ ಬಣ್ಣವಾಗೋ ಮೊದಲು
ಹಸಿರೇಕೆ ಬೆಳೆಯ ಬಣ್ಣವಾಗಬಾರದು.
By Gurusiddeshwar M Badiger

Comments