ಕನಸುಗಳು
By Sushma Odugoudar
ನಿದ್ರೆಗೂ ಕನಸಿಗೂ ಏನಿರಬಹುದು ನಂಟು
ಒಮ್ಮೆಯಾದರೂ ಎಲ್ಲರಿಗೂ ಕನಸು ಬೀಳುವುದುಂಟು
ಬೇಡಿ ಬಯಸಿದಾಗ ನಿದ್ರಾ ದೇವಿಯ ಆಲಿಂಗನ
ಜೊತೆಯಲ್ಲಿಯೇ ಸಿಗುವುದು ಸ್ವಪ್ನಸುಂದರಿಯ ಚುಂಬನ
ಇರುಳು ತೆರೆದಿಡುತ್ತಲೇ ತನ್ನ ಕತ್ತಲೆಯ ರಾಜ್ಯ
ಕನಸುಗಳು ನಡೆಸುವವು ತಮ್ಮದೇ ಸಾಮ್ರಾಜ್ಯ
ನಾವೇ ಹಾಸಿಕೊಂಡ ನಮ್ಮ ಹಾಸಿಗೆ
ಹೆದ್ದಾರಿಯಾಗುವದು ವಿವಿಧ ಕನಸಿಗೆ
ಅಬ್ಬಾ! ಎಂತಹುದು ಈ ನಿಶೆಯ ಸಾಗರ
ಅಲ್ಲೆಲ್ಲ ಬರಿ ಕನಸುಗಳದೇ ಆಗರ
ಮನದ ಭಾವನೆಗಳ ಪ್ರತಿಬಿಂಬವಾಗಿ
ಬಿಚ್ಚುತ್ತಾ ಹೋಗುತ್ತವೆ ಇವು ತರಂಗಗಳಾಗಿ
ಸುಪ್ತ ಮನಸಿನ ಭದ್ರ ಕೋಟೆಯ ಒಡಿದು
ಕನಸುಗಳು ನುಗ್ಗುತ್ತವೆ ಎಲ್ಲ ಶ್ರಾಂಕಲೆಗಳ ಕಡಿದು
ದೊರೆಯಿತೆಲ್ಲಿಂದ ಅವುಗಳಿಗೆ ಇಷ್ಟು ಪ್ರಬಲ ಶಕ್ತಿ
ಯಾರು ಹೇಳಿಕೊಟ್ಟರು ಹೀಗೆ ಹೊರಬರುವ ಯುಕ್ತಿ
By Sushma Odugoudar

Comments