ಕುಲವೆಂಬ ಅಂಧ
By Shreeraksha Gururaj Chulki
ಯಾಕೆ ಹೊಡೆದಾಡುವೆ ಬದುಕಿನಲಿ
ನಿಟ್ಟುಸಿರು ಬಿಟ್ಟು,
ಅರತಿರುವೆಯ ನಿನ್ನ ಕುಲ ನಿನ್ನ ಇತಿಹಾಸದಲಿ
ಸಮಯ ಬಂದರೆ ಹೋಗುವೆವು ಎಲ್ಲ ಬಿಟ್ಟು;
ತೆಗೆದುಕೊಂಡು ಮಲ್ಲಿಗೆ ಉದಾಹರಣೆಗೆ,
ನೋಡು ಅದರ ಜೀವನ ಒಂದು ದಿನದ ಮಟ್ಟಿಗೆ
ಜೀವನ ನಡೆಸು ನೀ ಕೊನೆಯವರೆಗೆ
ಆಗುವುದು ನಿನ್ನ ಜೀವನ ಬಹುಮಾನನದ ಪೆಟ್ಟಿಗೆ..
ಬಲ್ಲವರಿಲ್ಲ ಯಾರು ದೇವ ದೇವತೆಗಳನು
ಮಾನವರನ್ನು ಮೀರಿ
ನೋಡಿದವರಿಲ್ಲ ಅವರ ಉಡಿಗೆ ತೊಡುಗೆಯನು
ಸುಮ್ಮನೆ ಚಿತ್ರ ಬರೆದಿರುವರು ಎಲ್ಲ ಸೇರಿ.
.ಕುಲ ಗೋತ್ರಗಳನ್ನು ಹುಟ್ಟಿ ಹಾಕಿದವ ಮಾನವ
ತನ್ನ ಜೀವನವೆಂಬ ಬಂಡಿಯಲಿ,
ಉಡುಗೆ ತೊಡುಗೆಯಲಿ ಬಿಡು ನಿನ್ನ ಒಲವ,
ಬದುಕೆಂಬ ಪುಸ್ತಕದಲಿ..
ಧರ್ಮವೆಂಬುದು ಒಂದು ಪದ್ಧತಿ ಯಷ್ಟೇ
ಭೇದ ಮಾಡಲು ಒಂದು ಸ್ತಂಭವಲ್ಲ
ಜಾತಿ ನೀತಿ ಗಳು ನಡೆದು ಬಂದ ದಾರಿಯೆಷ್ಟೆ
ಮನೆ ಮನಗಳನ್ನು ದೂರ ಮಾಡುವುದಕಲ್ಲ
.. ಒ ಮಾನವ ನಿರ್ಮಿಸಿದೆ ನೀ ವಿವಿದ ಕುಲಗಳನು
ಜಾತಿ ನೀತಿಯ ಹೆಸರಿನಲಿ
, ನಾಶ ಮಾಡುತ್ತೀರುವೆ ನೀ ಪರಿಸರ ಸ್ನೇಹಿಗಳನು
ಪರಿಶುದ್ದವಾದ ಪ್ರಕ್ರತಿಯಲಿ..
ಯಾರು ಕಾಣರೊ ಈ ಲೋಕದಲಿ
ಇವರ ಕುಲ ಬ್ರಮೆ ಬಿಡಿಸಲು
, ಏನು ನಾನು ಮಾಡಬಹುದು ಇ ಧರೆಯಲಿ
ಮನುಜರ ಸಂಬಂಧವ ಗಟ್ಟಿಯಾಗಿ ಮುಂದುವರೆಸಲು?
ಬದುಕಿರಿ ಜಾತಿ ಮತಗಳ ಭೇದವಿಲ್ಲದಂತೆ,
ಅಗಾಗುವುದುನಿಮ್ಮಜೀವನಸಿಹಿಜೇನಿನಂತೆ..
By Shreeraksha Gururaj Chulki

Comments