top of page

ಕೆಂಪು ದೀಪ - By Bindu u

Written By: Bindu u

Category: Poetry

Competition: Poetry and Creative Writing Competition 2026

Bindu u, writing as "ಕೆಂಪು ದೀಪ," brings a lyrical contribution to the Poetry category of the Poetry and Creative Writing Competition 2026. This competition, hosted by Hashtag Kalakar, showcases diverse creative talents. Bindu's poem, "ಕೆಂಪು ದೀಪ," is a captivating exploration of emotions and dreams, presented in the rich tapestry of Kannada language.

About the Work

"ಕೆಂಪು ದೀಪ" is a poignant journey through emotional landscapes, weaving dreams and desires into a vivid tapestry. The poem employs rich imagery and rhythmic elements to convey its themes, capturing the essence of life’s fleeting yet profound moments. Bindu u's work is marked by an evocative mood and a narrative style that invites readers to ponder deeper meanings within their own experiences.

ಕೆಂಪು ದೀಪ

Original Submission by Bindu u

ಕೆಂಪು ದೀಪ

ಮೈ ಮರೆತ ಮದನಿಕೆಯ ಮನದುಂಬ ಬೆಳ್ಮುಗಿಲು

ಕನಸುಗಳ ಕಣ್ಣಲ್ಲಿ ಕಾಣುತಿದೆ ಸವಿ ಹೊನಲು

ಹೊಮ್ಮುತಿವೆ ರಾಗಗಳು ಹೃದಯ ಬಡಿತವೆ ತಾಳ

ಇಟ್ಟ ಹೆಜ್ಜೆಗೆ ಒಮ್ಮೆ ಗೆಜ್ಜೆಗಳ ಹಿಮ್ಮೇಳ ||

ಕಾಡಿಗೆಯ ಕಪ್ಪನ್ನು ತೀಡಿ ತಾ ಕಂಗಳಿಗೆ

ಹಚ್ಚಿದಳು ಕೆಂಪನ್ನು ಮಧು ತಂಬಿದ ತುಟಿಗೆ

ಹಚ್ಚ ಹಸುರಿನ ಸೀರೆ ಪಚ್ಚೆ ಹವಳದ ಹಾರ

ಬಿಗಿದ ಕುಪ್ಪಸವೇಕೋ ತಾಳದದು ಮುಂಭಾರ ||

ಬಂದವನ ಎದುರಲ್ಲಿ ಇಟ್ಟರವರು ಬೆಲೆಯ

ರಾಶಿ ಹೊನ್ನನು ಕೊಟ್ಟು ಕೊಂಡನವಳ ಹರೆಯ

ಓ ಹೆಣ್ಣೆ ಕೇಳೆಂದ ನೀನಿನ್ನು ನನ್ನ ಸ್ವಂತ

ನಿನ್ನೆಲ್ಲ ಚೆಲುವಿನ್ನು ಮೀಸಲದು ನನಗಂತ ||

ಹೂವ ಹಾಸಿಗೆ ಮೇಲೆ ನಲುಗಿದಳು ಆ ರಾತ್ರಿ

ಕಾಮ ತೃಷೆಯದು ತಣಿಯೆ ಮುಗಿದು ಹೋಯಿತು ಮೈತ್ರಿ

ಬಾಡಿ ಹೋಗಿರೋ ಹೂವು ನೀನೀಗ ಅವನೆಂದ

ಹೀರಿಯಾಗಿದೆ ಮಧುವ ಇನ್ನು ಕಾಣೆನು ಅಂದ ||

ತಿರುಗಿ ಬಂದಳು ಅವಳು ಮೊದಲಿದ್ದ ಸೂರರಸಿ

ಮನದ ಕನಸುಗಳೆಲ್ಲ ಹೋಗಿದ್ದವು ಅಳಸಿ

ಅವಳೊಡಲು ತುಂಬಿತ್ತು ಹೊಸ ಜೀವವನು ಹೊತ್ತು

ಹಾಸಿದರೆ ಸೆರಗನ್ನು ಮಾತ್ರ ಸಿಗುವುದು ತುತ್ತು ||

ಅವಳ ಮಡಿಲನು ತುಂಬಿ ಜನಿಸಿತು ಕೂಸೊಂದು

ಹೆಣ್ಣೆಂದು ತಿಳಿಯೆ ಮುದುಡಿತವಳ ಮನ ನಂದು

ಬೆಳೆದು ಅರಳಲಿ ಹೂವು ಬೀರಿ ಸೌಗಂಧವನು

ಬೆಲೆವೆಣ್ಣೆ ಆಗುವಳು ನುಡಿದರು ಭವಿಷ್ಯವನು ||

ಅರಳೊ ಮುನ್ನವೆ ಕಮರೋ ಹೂವುಗಳದೆಷ್ಟೋ

ಕೆಂಪು ದೀಪದಡಿ ಇರುವ ಬಾಳ್ವೆಗಳದೆಷ್ಟೋ

ಕಾಣುವುದೆ ಕತ್ತಲಲಿ ಮುನ್ನ ದಸೋ ಬೆಳಕು

ಹೊರ ಬರಲು ಇದೆಯೇನು ಹೊಸತೊಂದು ಬದುಕು ??

About the Competition

The Poetry and Creative Writing Competition 2026 by Hashtag Kalakar is a prestigious platform that celebrates the artistic expressions of writers from around the world. This year’s competition continues the tradition of providing a stage for poets and writers to share their unique voices, fostering a community of creativity and literary excellence.

We extend our gratitude to Bindu u for sharing "ಕೆಂಪು ದೀಪ" with us as part of the Poetry and Creative Writing Competition 2026. Your poetic expression enriches our community and invites contemplation and appreciation. Thank you for contributing your voice to this year's event.

About Hashtag Kalakar

Hashtag Kalakar is a creative platform dedicated to providing artists, writers, singers and other creative talents with opportunities to showcase their work and reach wider audiences through competitions, features and creative initiatives.

 
 
 

Comments

Rated 0 out of 5 stars.
No ratings yet

Add a rating
bottom of page