ಕಾಂಚಾಣ.
By Shreeraksha Gururaj Chulki
ಸಿರಿವಂತರ ಮನೆಯಲಿ
ಚಂಚಲ ಮನಸಿನ ಲಕ್ಷ್ಮಿಯು
ಚೊಚ್ಚಲ ಜನನ ಪಡೆದಿರುವಾಗ,
ನೂರ ಮಕ್ಕಳ ಹಡೆದರೂ ಈ ಬಡವನ ಮನೆಯಲಿ ಕೇಳಲಿಲ್ಲವೇ ಲಕ್ಷ್ಮಿಯ ಕೂಗು?
ಸಂಪತ್ತಿನಿಂದ ತುಂಬಿರುವ
ಶ್ರೀಮಂತರ ಕಡಲ ಸೇರುವ ಈ ಹಣವು,
ಬಡವನ ಕೆರೆ ಬರಡಗಿದ್ದರೂ
ಕಡಲ ದಾರಿಯ ಹುಡುಕಿ ನಡೆಯಿತು,
ಇಲ್ಲಿ ಕೆರೆಯ ಕಡಲ ಸೇರುವೆನೆಂಬ ಬಯಕೆಯಲಿ
ಹೆಜ್ಜೆ ಮುಂದಿಡುತ್ತಲೇ ನಡೆಯುತಿದೆ
.. ಹೇಳಿ, ಕೆರೆ ನಿಜವಾಗಿಯು ಕಡಲ ಸೇರಬಹುದೇ??
By Shreeraksha Gururaj Chulki

Comments