ಎಂಥ ವಿಪರ್ಯಾಸ!
By Archana P. Murthy
ಮುಂಜಾನೆ ನಸುಕು ಹರಿವ ಮುನ್ನ
ಕೆಲಸಕ್ಕೆ ಹಾಜರಿರುವವರು,
ಎಲ್ಲ ಅಂಗಡಿ ಬೀದಿ , ಮನೆ ಮುಂದಿನ ಹಾದಿ
ಗುಡಿಸಿ ಶುಭ್ರಗೊಳಿಸುವವರು.
ಮಳೆ ಇರಲಿ ಬಿಸಿಲಿರಲಿ
ರಾಶಿ ಕಸದ ಮೂಟೆಗಳಿರಲಿ
ಗುಡಿಸಿ ಬಿಡಿಸುವರು
ಬಣ್ಣ ಬಣ್ಣದ ರಂಗೋಲಿ
ನಮ್ಮ ಬದುಕಿನ ಅವಿಭಾಜ್ಯ ಅಂಗ ಈ
ಪೌರಕಾರ್ಮಿಕರು.
ಇರಲಿ ಇವರಿಗೆ
ನಮ್ಮ ನಿಮ್ಮೆಲ್ಲರ ಪ್ರೀತಿಯ ಪುರಸ್ಕಾರ.
ಬೆಳಗಾಗೆದ್ದು ಎಲ್ಲರ ಕಣ್ಣು ತಪ್ಪಿಸಿ
ಕಸ ಹಾಕುವುವವರಿವರು
ಯಾವ ದಾರಿಯಾದರು ಸರಿ
ಬಯಲಿಗಾದರು ಗುಡಿಗಾದರು ಸರಿ
ಮೂಲೆ ದೊರೆತರೆ ಸಾಕು ಕಸ ಒಗೆಯುವವರು
ಮರವಿರಲಿ , ಶಾಲೆ ಆಸ್ಪತ್ರೆ ಎದುರಿರಲಿ,
ಬೆಳೆಸುವರು ಕಸದ
ಪರ್ವತವನಿವರು.
ನಮ್ಮ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ ಇವರು,
ಇರಲಿ ಇವರಿಗೆ
ನಮ್ಮ ನಿಮ್ಮೆಲ್ಲರ ಧಿಕ್ಕಾರ.
By Archana P. Murthy

Comments