ಈ ಸಂಜೆ ಬೇರೆಯಾಗಿದೆ..
By Shreeraksha G Chulki
ಈ ಜನರ ಮಧ್ಯೆ ಕಳೆದು ಹೋಗಿದೆ
ನನ್ನ ಮನವು ಭಾರವಾಗಿದೆ ಹೊರಲು ಈ ಮೌನವ
ತುಸು ನೀ ಬಳಿಬಂದು ನಿಗಿಸುವೆಯ ಈ ಒಂಟಿತನವಾ?.
ನನ್ನದಲ್ಲದ ನಗುವನು ಹೊತ್ತು ತಿರುಗಿ ಸಾಕಾಗಿದೆ
ನನ್ನದೇ ಬಿಂಬ ಕಂಡು ಕಣ್ಣ್ ಹನಿ ಸಿಂಪಡಿಸಿದೆ,
ಕಾರಣವಿಲ್ಲದ ಇ ದಿನಗಳು ಸದ್ದಿಲ್ಲದೇ ಕಳೆಗತಿವೆ
ಹೃದಯ ಬಡಿತವನು ಇನ್ನೂ ಜೋರಾಗಿಸಿವೆ..
ನೆನಪುಗಳ ನೆಪ ಹೇಳಿ ಬಾಲ್ಯಕ್ಕೆ ಹಾರಲೇ?
ಮುಗ್ಧ ಮನವ ಮರು ಪಡೆಯಲು ಸಮಯಕೆ ಅರ್ಜಿ ಹಾಕಲೇ?
ಚಿಂತೆಗಳ ಸಂತೆಯಲಿ ಕಣ್ಣು ಮಿಟುಕಿಸಿ ನಕಲಿ ನಗೆ ಬೀರಿ
ಕಣ್ಣು ಇತ್ತ ಹಾಯಿಸಿ
..ಕಡಲಾಳದಲಿ ಕಂಡ ಮುತ್ತೊಂದು
ನನ್ನ ಕನಸಲಿ ಬಂದು ಅದರ ಹೊಳಪು ಯೆನ್ನ ತಗುಲಿ
, ರೆಪ್ಪೆಯಗಳಿಸಿದವುಇಧರೆಯನೋಡಲೆಂದು...
By Shreeraksha G Chulki

Comments