ಇಷ್ಟೇ ಜೀವನ
By Abhishek H J
ಇದ್ದಾಗ ಬರಲ್ಲ ಅಂದವ್ರೆ,
ಹೋದ್ ಸುದ್ದಿ ಕೇಳಿ
ದೂರದಿಂದ
ಓಡೋಡಿ ಬರ್ತಾವ್ರೆ.
ಇದ್ದಾಗ ಹಾಡ್ಯಡ್ ಕೊಂಡು ನಕ್ಕವ್ರೆ,
ಹೋದಮೇಲೆ ಹಾಡ್ಯಡ್ ಕೊಂಡು ಅಳತವ್ರೆ...
ಬರ್ತಾರೆ ಗುಣಿ ತನಕ.
ಇರ್ತಾರೆ ಮಣ್ಣ ಮುಚ್ಚೋ ತನಕ..
ಪಾಪಿ ಅಂದವ್ರೆ ,
ಪಾಪ ಅಂತವ್ರೆ..
ಊರಿಗೊಂದು ಊಟ.
ಮನೆಗೊಂದುಪೋಟ..
By Abhishek H J

Comments