ಅಮ್ಮ ಕೊಡಿಸಿದ ದೀಪ
By Archana P. Murthy
ದೀಪಾವಳಿ ಬೆಳಕಿನ ಹಬ್ಬ.
ಬಹಳ ವಿಶೇಷದ ಹಬ್ಬ .
ಈ ದೀಪ ನೀ ಕೊಡಿಸಿದ ದೀಪ.
ಬಹಳ ವಿಶೇಷದ ದೀಪ.
ಏನಿದರ ವಿಶೇಷ?
ಬಣ್ಣವೇ, ಗಾತ್ರವೇ, ಹೊಳಪೇ, ಲೋಹವೇ?
ಬಣ್ಣ ನಗಣ್ಯ.
ಗಾತ್ರ ನೆಪಮಾತ್ರ.
ಹೊಳಪು ಚಿನ್ನದ ಲೇಪು.
ಲೋಹ ಯಾವುದು ಎಂದು ಇಲ್ಲ ಸಂದೇಹ.
ಈ ಬದುಕು ಈ ಬೆಳಕು ನೀ ನೀಡಿದ ಉಡುಗೊರೆ.
ಬತ್ತದಾ ವಾತ್ಸಲ್ಯದ ತೊರೆ.
ಈ ದೀಪ ಬೆಳಕಿನೆಡೆಗೆ ನೀ ತೋರಿಸಿದ
ಹಾದಿಯ ಸಂಕೇತ.
ಇರುವುದು ನನ್ನ ಬಳಿ ಶಾಶ್ವತ.
By Archana P. Murthy

Comments