top of page

ಅನಾಮಿಕ:

Dec 7, 2022
1 min read

By Shreeraksha Gururaj Chulki


ಹರಿವ ಸಾಗರದಲಿ

ಮಾತಿಲ್ಲದೆ ತೇಲುತಿರುವ ಈ ನನ್ನ ಮನವು

ಹುಟ್ಟಿಲ್ಲದ ದೋಣಿಯಲಿ

ಸುಳಿ ಸಿಕ್ಕಿ ನರಳತಿರುವಾಗ,

ಯಾರಿಗೂ ಕೇಳಲಿಲ್ಲವೇ ಈ ನನ್ನ ಕೂಗು?


ಜನಜಗುಳಿoದೊರಟ ದೋಣಿಗೆ

ಭಾರವಾಯಿತೇ ನನ್ನ ಹಗುರ ಮನಸ್ಸು!

ದಿಕ್ಕಿಲ್ಲದೆ ದೂಡಿ ಹೊರಟ ಏಕಾಂಗಿಗೆ

ಶಾಪವಾಗಿದ್ದಾದರೂ ಯಾರ ಮುನಿಸು?


ಹನಿನೀರು ಬಯಸಿ ಬೇಡಿತು

ಈ ಏಕಾಂಗಿ ಜೀವ

ಕೊಡುವ ಕೈ ಕಾಣದೇ ಬೆಂದಿತು

ಮನದೊಳಗೆಯೇ

ಕಂಬನಿಯ ಕುಡಿದು

ಬಲ್ಲೇಯಾ ಅದರ ನೋವ?





ದೂಡುತ್ತ ಹೊರಟ ನನ್ನ ದೋಣಿಗೆ

ಹತ್ತಿರವಾಯಿತoತೆ ದಡವು.

ಕೇಳಿಲ್ಲವೆಂದು ಕೂಗಿ ಹೇಳುವೆ ಕಿವುಡರ ಸಂತೆಗೆ

ಒಲಿಯಲಿಲ್ಲ ಈ ನನ್ನ ಮನವು.

ಜನ ಜಂಗುಳಿಯಿಂದೊರಟಿದ್ದವರಿಗೆ

ತೋಚಲಾರದು ದಾರಿ ಯಾವ ದಿಕ್ಕಿಗೆ

ಹನಿನೀರು ಇಲ್ಲೆಂದವರ ದೋಣಿಯಲ್ಲೀಗ,

ಚಿಮ್ಮುತಿಹುದು ಚಿಲುಮೆ,

ಮಧ್ಯದ ತೂತಿನಿಂದ...

ಪಾಪದಕೊಡದಿಂದ!!!


By Shreeraksha Gururaj Chulki




Recent Posts

See All
Mirrored Truth

By Rufaida Manzoor I stood beside the silent lake, With eyes that felt no urge to break. My hair fell low in shadows deep, The waters...

 
 
 
My Antidote

By Anveeksha Reddy You fill my books with your ink, seeping into the pages bright and brilliant The words etched into the cracks of it,...

 
 
 
Avarice

By Anveeksha Reddy You tear my skin and pick on my bones I label it as gluttony for you Churning and shattering the remains of my...

 
 
 

Comments

Rated 0 out of 5 stars.
No ratings yet

Add a rating
bottom of page