Ravi Kannada Kavana
By Ravi N
ಮರೆಯಲಾರದ ಜನ ತೊರೆಯಲಾಗದ ಮನ ಬಿರುಕೊಡೆದ ಭಾವನೆಗಳ ಜೊತೆ ಶೀತಲ ಕದನ ನೆನ್ನೆಯ ನೆನೆದು ಇಂದೇಕೊ ಮರುಗಿಹುದು ಮನ ಸಮಯದ ಸಂಯಮ ಕಳೆದು ಪರಿಸ್ಥಿತಿಯ ತಪನ ನೆನ್ನೆ ಮೊನ್ನೆಗಳ ಮೊಂಪರಲಿ ಮನ ಕಳೆದು ಕೊಂಡಿಹುದು ನೆಮ್ಮದಿಯ ಕ್ಷಣ ಕಾಲ ಕ್ರಮೇಣ ಬದಲಾವಣೆ ಸಹಜ ಗುಣ ಯಾಂತ್ರಿಕ ಮನಸ್ಥಿತಿ ಇದಕೆಲ್ಲಾ ಕಾರಣ
ಒಂದೆಡೆ ನಿಂತ ನೀರಾಗಬಾರದು ಮನುಜ ಸಾಧಕ ಭಾದಕಗಳ ನಡುವೆ ಮುನ್ನಡೆ ಸಹಜ ಸಮಾಜದ ಜೊತೆ ಸಾಗುವುದು ಸವಾಲೆಂಬುದು ನಿಜ ಪರಿಸ್ಥಿತಿಯ ಒತ್ತಡಕೆ ಪರಿತಪಿಸುವುದು ಸಹಜ
By Ravi N

Comments