Ravi Kannada Kavana
By Ravi N
ನೆನ್ನೆಯ ನೆನಪುಗಳ ನೆನೆದು
ಇಂದಿನ ಮಿಡಿತಗಳ ತೊರೆದು
ಮುಂದಿನ ಕನಸುಗಳ ಕೊರೆದು
ಮೂಖವಾಗಿಹುದು ಮನವಿಂದು
ಶೂನ್ಯ ಸಾಧನೆ ನೀನಿರದ ಬದುಕು
ನಿನ್ನಯ ನಗುವಲ್ಲಿ ಬಾಳಿನ ಬೆಳಕು
ಮನದ ಮುಗಿಲಿಗೆ ನೀ ನೀಡು ಹೊಳಪು
ಬದುಕಿಗೆ ಬೇಕಿದೆ ಪ್ರೇರಣೆಯ ಹುರುಪು
ಬಯಕೆಗೆ ಮನವು ಬಾನಂಗಳ ಅಂದು
ನೀನಿರದೆ ಜಗವೆಲ್ಲಾ ಖಾಲಿ ಇಂದು
ಸಾರಥಿ ಇರದ ಬದುಕಿನ ಪಯಣ ನಂದು
ಸಾಗುವಬದುಕಿನಸೆಳೆತನಿನ್ನಯಮಿಡಿತಎಂದೆಂದೂ
By Ravi N

Comments