Preema Nivedane
By Dr.Pooja S C
ಹೂವಾಗಿ ಅರಳಿದವು ಮೊಗ್ಗಾಗಿದ್ದ ಮಾವಿನ ಚಿಗುರು
ತಿಳಿ ಬಿಸಿಲು ಕಾವೇರಿತು ಮೌನಕ್ಕೆ ಬೇಸತ್ತು ಇಂದು..
ಮಳೆಯಲ್ಲಿ ಮಿಂದು ನೀರಾಗಿ ಹರಿದವು ಕಣ್ಣೀರ ಬಿಂದು
ಚುಮುಚುಮು ಚಳಿಯ ನಡುಕದಲಿ ಕೇಳದೆ ಹೋಯಿತು ನನ್ನ ದನಿ ಅಂದು...
ಇಳಿಸಂಜೆ ಮಂಡಿಯೂರಿ ಕಾದಂತೆ ಕತ್ತಲ ರಾತ್ರಿಗೆ
ಪ್ರೇಮ ನಿವೇದನೆ ಮಾಡಲು ಹಿಂಜರಿಯುತು ನಾಲಿಗೆ...
ಕಗ್ಗತ್ತಲ ಕೊಲೆಯಾಗಿದೆ ನಸುಕಿನ ಕಿರಣಗಳಿಂದ
ಮೌನವಾಗಿಯೇ ಉಳಿದಿದೆ ಹೇಳದ ಮಾತೊಂದು ಬಹುದಿನಗಳಿಂದ....
By Dr.Pooja S C

Comments