Poem On Election In Kannada
- Hashtag Kalakar
- May 10, 2023
- 1 min read
By Abhishek H J
ಮಾರು ವೇಷದಲ್ಲಿ
ಮನೆ ಮನೆಗೆ ಬರ್ತಾರೆ...
ಸಾವಿರ ಸುಳ್ಳಿನ
ಸರಮಾಲೆಯ ಹಾಕ್ತಾರೆ...
ನಾವು ನಿಮ್ಮವರು ಅಂತ
ಬಾಯ್ತುಂಬಾ ಅಂತಾರೆ....
ಸತ್ತಂಗ್ ಅತ್ತಂಗ್ ಮಾಡಿ
ಕೈ ಕಾಲು ಹಿಡಿತಾರೆ....
ಕೈ ಜೋಡಿಸಿ ಅಂತ ಕೈಗೆ
ಸೀರೆ ಸಾರಾಯಿ ಇಡುತ್ತಾರೆ...
ಕತ್ತಲ ರಾತ್ರಿಲಿ
ಮಕ್ಳು ಮರಿಗೆಲ್ಲ ಕುಡುಸ್ತಾರೆ...
ಬಣ್ಣದ ನೋಟಿನ ಆಸೆಗೆ
ಮತ ಮಾರ್ಕೋಳಿ ಅಂತಾರೆ...
ಮತ ಹಾಕಿದ ಮೇಲೆ
ಯಾರ್ನೀವುಅಂತಾರೆ....
By Abhishek H J

Comments