Naanondu Mara
By Dr.Pooja S C
ಕೇಳಿರಿ ಕೇಳಿರಿ ನಾನೊಂದು ಮರ
ಮಾನವನಿಗೆಂದೆ ದೇವರು ಕೊಟ್ಟ ವರ
ಕೊಲ್ಲದಿರಿ ಕೊಲ್ಲದಿರಿ ದಯಮಾಡಿ ನನ್ನನ್ನು
ಕೊಂದು ಮಾಡದಿರಿ ಪಾಪ ಇನ್ನು
ಉಸಿರಾಡುತ್ತಿರುವಿರಿ ನೀವು ನನ್ನ ಉಸಿರು
ಹಾಗಾಗಿ ಹೆಚ್ಚುತ್ತಿರಲಿ ಎಲ್ಲೆಡೆ ಹಚ್ಚ ಹಸಿರು
ನಾನಿದ್ದಲ್ಲಿ ಆಹಾ ! ಎಂತಹ ತಂಗಾಳಿ
ನಾನಿಲ್ಲದೆ ಹೋದಲ್ಲಿ ಕಾಡುವಳು ಬಿಸಿಲ ಬೇಗೆಯ ಕಾಳಿ
ಹಸಿದ ಹೊಟ್ಟೆಗೆ ನೀಡುವೆ ಹಣ್ಣು
ಆದರೆ ನಿಮಗೆ ನಾ ನಿಂತಿರುವ ನೆಲದ ಮೇಲೆಯೇ ಕಣ್ಣು
ಕಟ್ಟಿ ಹಗ್ಗವ ನನಗೆ ಆಡುವರು ಜೋಕಾಲಿ
ಅದನ್ನು ಕತ್ತರಿಸಿದ ಹೊಡೆದೀತು ನಿಮ್ಮ ಜೀವ ಜೊಲಿ
ಹೂ ಬಿಡುವೆ ನಾನು ಪ್ರಕೃತಿ ಸೌಂದರ್ಯ ಹೆಚ್ಚಿಸಲು
ನನ್ನ ಕತ್ತರಿಸುವಿರಿ ನೀವು ನಿಮ್ಮ ಜೇಬು ತುಂಬಿಸಲು
ನಿಮ್ಮನ್ನು ಕತ್ತರಿಸಿದರೇ ಆಗುವುದು ನಿಮಗೆ ನೋವು
ನಿಮಗೆ ಮಾತ್ರ ಬೆಲ್ಲ ನಮಗೇಕೆ ಬೇವು?
ಹಸಿರು ತುಂಬಿದ ಭೂಮಿಯು ಅದೆಷ್ಟು ಚಂದ
ಬರಿದಾದ ನೆಲದಲ್ಲಿ ಹೇಳಿ ಎಲ್ಲಿಹುದು ಅಂದ?
ಹಾಗಾಗಿ ಮೊದಲು ಎಲ್ಲರೂ ಒಂದು ಬೀಜವನ್ನು ಬಿತ್ತಿ
ಇಲ್ಲವಾದರೆಆಪತ್ತುಕಟ್ಟಿಟ್ಟಬುತ್ತಿ!
By Dr.Pooja S C

Comments