Mookhavismithanaade Nanu
- Hashtag Kalakar
- May 9, 2023
- 1 min read
Updated: Jun 10, 2023
By Shivraj C N
ಕಣ್ಮುಂದೆ ಬಂದರೆ ರೆಪ್ಪೆಯೂ ಬಡಿಯಲು ಯೋಚಿಸುವ ಅಂದು ನಿನ್ನದು,
ಓ ನನ್ನ ಚೆಲುವೆಯೇ ಮೂಕವಿಸ್ಮಿತನಾದೆ ನಾನು .
ಅಪ್ಸರೆಯೂ ಒಂದು ಕ್ಷಣ ಬೆರಗಾಗುವಂತಹ ನಗೆ ನಿನ್ನದು
ಕಣ್ನೋಟದಲ್ಲೇ ಮಾತಾಡುವ ನಡೆ ನಿನ್ನದು,
ಓ ನನ್ನ ಮನಸೇ ಮೂಕವಿಸ್ಮಿತನಾದೆ ನಾನು
ನಾ ಹೇಗೆ ವರ್ಣಿಸಲಿ ನಿನ್ನ ಬಗೆಯನ್ನು,
ನನ್ನಲ್ಲಿ ನಾನೇ ಕಳೆದುಹೋಗಿರುವಾಗ ,
ಪದಗಳಿಲ್ಲದೆ ವ್ಯಾಕರಣವೇ ಸೋತು ನಿಂತಿರುವಾಗ
ಪ್ರತಿ ಧಮನಿಯೂ ನಿನ್ನನ್ನೇ ತಪಿಸುವಂತಾಗಿ
ಓ ನನ್ನ ಸಖಿಯೇ ಮೂಕವಿಸ್ಮಿತನಾದೆ ನಾನು
ನಿನ್ನ ಒಲವೆಂಬ ಬಲೆಯಲಿ ಸಿಲುಕಿರುವ ಪಕ್ಷಿ ನಾನು,
ನನ್ನ ಹೃದಯ ವಾಸಿ ನೀನು
ಒಲವಿಗಾಗಿ ಪರಸ್ಪರ ಜೀವಗಳು ಮಿಡಿಯುವಾಗ,
ಯಾರ ಸಮ್ಮತಿಗಾಗಿ ಕಾದಿರುವೆ ಇನ್ನು
ನಿನ್ನೆಲ್ಲ ನೋವು ನಲಿವುಗಳಿಗೆ ಸ್ಪಂದಿಸುವೆ ನಾನು,
ಮುಗ್ಧ ಮನಸ್ಸುಗಳು ಸ್ತಬ್ಧವಾಗುವ ಮುನ್ನ ತಿಳಿಸು ಬಿಡು ನಿನ್ನ ಸಂದೇಶವನು
ಅನುಭವಿಸಿದವರ ವ್ಯಥೆಯು ಕೇಳುಗರಿಗೆ ಕಥೆಯಾದಂತೆ,
ತಡೆಯಲಾರೆ ಈ ವಿರಹವನ್ನು ಚೆಲುವೆ ನನ್ನನ್ನು ಸಮ್ಮತಿಸಿನ್ನು
ಕತ್ತಲೆಯೂ ಮುಗಿಲು ಚುಕ್ಕಿಗಳ ಗೆಳೆತನಕ್ಕೆ ಸಾಕ್ಷಿಯಾದಂತೆ,
ಮಳೆಯು ಭಾನು ಭೂಮಿಯ ಸಾಂಗತ್ಯವನ್ನು ಬೆಸೆದಂತೆ
ಒಲವಿಂದ ಒಂದಾಗಬೇಕಿದೆ ಚೆಲುವೆ ನಾವಿಬ್ಬರನ್ನು,
ಓ ನನ್ನ ಮನವೇ ಮೂಕ ವಿಸ್ಮಿತನಾದೆ ನಾನು.
By Shivraj C N

Comments