Kannada Poem Rom Ravi
By Ravi N
ಉನ್ಮಾದ ನೀನು ಉಲ್ಬಣ ನಾನು ಅಮೃತ ನೀನು ಅಲ್ಪನು ನಾನು ವರ್ಚಸ್ಸು ನೀನು ಚರ್ಚಾಸ್ಯ ನಾನು ಯಶಸ್ಸು ನೀನು ಆಚರಣೆ ನಾನು ಅರಿವು ನೀನು ಆಂತರ್ಯ ನಾನು ಅನುರಾಗ ನೀನು ಅನುಬಂಧ ನಾನು ವರವು ನೀನು ವಧುವಾಗಿ ಪಡೆದೆ ನಾನು ಅಂತರಾತ್ಮದ ಗರಿಮೆ ನೀನು ಧನ್ಯ ನಾನು
ನಿನ್ನಲ್ಲೆ ಆವೃತ ಅನವರತ ಮನಸೆಲ್ಲ
ಕಾನನದಿ ಕಣ್ಮರೆಯಾದಂತೆ ಕಹಿಯೆಲ್ಲ
ನಶೆಯಂತೆ ನನ್ನನ್ನೇ ಆವರಿಸಿಹೆಯಲ್ಲ
ಹುರುಪಾದ ಹೊಸ ಜೀವ ಸಾಕಾರ ಕನಸೆಲ್ಲ
ಸರಸದಿ ಸ್ನೇಹಿತೆ ಪ್ರೀತಿಯ ಮೋಹಿತೆ ಒಲವಿನ ಕಾಣಿಕೆ ಪ್ರೇಮದ ಮೋಹಕೆ ಹೂಬಾಣ ನೋಟಕೆ ಕಣ್ಸನ್ನೆ ನಾಚಿಕೆ ಹರುಷದ ಈ ವರುಷಕೆ ಕಂದಮ್ಮನ ಕಾಣಿಕೆ ನಾ ಜನಿಸಿ ಬಂದರೆ ನೂರಾರು ಜನುಮ ಸತಿಯಾಗಿ ನೀನಿರೆ ಪಾವನ ಪುನರ್ಜನ್ಮ!!
By Ravi N

Comments