Kannada Kavithe Ravi
By Ravi N
ಕನಸೊಂದು ಬಂದಾಗ ಕನಸೊಂದ ಕಂಡಾಗ ನಾ ನಿನ್ನ ಕಾಣುವಾಸೆ
ಒಮ್ಮೆ ನಿನ್ನ ಕಂಡಾಗ ಬೆಚ್ಚಿ ಬೀಳುತಿದ್ದ ಮನವ ಮತ್ತೆ ಪಡೆವಾಸೆ
ನಿನ್ನ ಮುಗದಿ ಮಿಂಚಂತೆ ಕಾಣ್ತಿದ್ದ ನಗುವನ್ನ ನಾ ನೋಡುವಾಸೆ
ಮಾಗಿ ಹೋಗಿಹ ಮನವ ಮರುಕಳಿಸಿ ಪಡೆವಾಸೆ
ಈ ಎಲ್ಲಾ ಆಸೆಗಳ ನಡುವೆ ನಾನಾರೆಂದು ಅರಿವಾಸೆ
ಪುಟ್ಟ ಮಗುವಿನ ನಗುವಷ್ಟು ನಿಷ್ಕಲ್ಮಶ ನನ್ನೀ ಮನ
ಅರಿವಿಲ್ಲದೆ ನೀ ನನ್ನ ನೋಡಿದ ಆ ಕ್ಷಣ
ತಿಳಿಯದೆ ಆಯ್ತಲ್ಲಾ ನಮ್ಮೀ ಮನಸ್ಸುಗಳ ಮಿಲನ
ನಗಬಾರದಿತ್ತು ನೀನಾದಿನ, ಬರಬಾರದಿತ್ತು ನನಗೀದಿನ
ನಗೆಯ ಅಲೆಗೆ ಸಿಕ್ಕಿ ಕೊಚ್ಚಿ ಹೋಗಿದೆ ಮನ
ಕಳೆದು ಹೋಗಿರುವ ಆ ನನ್ನ ಮನ ಮರಳಿ ತರುವುದೇ ನಿನ್ನನ್ನ
ತಂದರು ತರಬಹುದು ಮತ್ತದೇ ನಿನ್ನ ನೆನಪನ್ನ
ಬಾಡಿ ಹೋಗಿರುವ ಬಳ್ಳಿಯಂಥಾಗಿದೆ ಮನ
ದಯಮಾಡಿ ತರಬೇಡ ಮತ್ತೆ ಅವಳ ನೆನಪನ್ನ
ಹುಡುಕಾಟದ ಗುಂಗಲ್ಲಿ ಮರೆತಿರುವೆ ನಾ ನನ್ನನ್ನ....
ಅರ್ಥವಾಗದ ಬದುಕು ಕಟ್ಟಕಡೆವರೆಗೂ....
By Ravi N

Comments