Kannada Kavithe From Ravi
By Ravi N
ಮನದ ಮುಗಿಲಿನಲ್ಲಿನ ನಕ್ಷತ್ರ ನೀನು.... ಆ ನಕ್ಷತ್ರದ ಹೊಳಪು ನಾನು..... ಮನಸ್ಸಿನ ಶಾಂತ ಸಾಗರ ನೀನು.... ಸಾಗರದ ಅಲೆಯು ನಾನು.... ಮನದ ಆಸೆಗಳ ಹೂ ನೀನು.... ಆ ಹೂವಿನ ಪರಿಮಳ ನಾನು..... ಕನಸ್ಸುಗಳ ಕೊಳದಲ್ಲಿಯ ತಾವರೆ ನೀನು.... ಆ ತಾವರೆಯ ಮೇಲ್ಲಿನ ಬಿಂಧು ನಾನು.... ಮನಸ್ಸಿನ ಭಾವ ನೀನು .....
ಆ ಭಾವಗಳ ಮೂಲ ನಾನು .... ಮನದಲ್ಲಿಯ ಮೂಡ ನೀನು ...... ಆ ಮೋಡದ ಮರೆಯಲ್ಲಿಯ ಮಿಂಚು ನಾನು.... ಮನದ ಮೌನ ನೀನು.... ಆ ಮೌನದ ಮಾತು ನಾನು.... ಮನದಾಳದ ಮಾತು ನೀನು.... ಆ ಮಾತಿನ ಅರ್ಥ ನಾನು... ಮನಸ್ಸಿನ ಕಾವ್ಯ ನೀನು..... ಆ ಕಾವ್ಯದ ಭಾವ ನಾನು....
By Ravi N

Comments