Kannada Kavithe From Ravi
By Ravi N
ನಿನ್ನ ನೋಡಿದಂದು ಕಂಡೆನು ಕನಸು
ಕನಸಲ್ಲೂ ಕಂಡಿದ್ದು ನಿನ್ನಯ ಮುನಿಸು
ನಿನ್ನ ಓರೆ ನೋಟವೇ ಬಲು ಸೊಗಸು
ಮೌನಕ್ಕೂ ಮೌಲ್ಯವಿಹುದು ಆಲಂಗಿಸು
ಬಯಕೆಗಳಿಗೆ ನಾಂದಿ ನೋಡುವ ಕಣ್ಣು
ಬಾಳಿಗೆ ಬುನಾದಿ ಆದರೆ ಹೆಣ್ಣು
ಸುಮ್ಮನೆ ನೋಡಲು ಬರೀ ಹೆಣ್ಣು
ಮನವ ಕೊಟ್ಟೊಡನೆ ಮುಚ್ಚುವುದು ಕಣ್ಣು
ಹರಿಯದ ನದಿಯೆಂದೂ ಕಡಲನು ಸೇರದು
ಮೋಡಗಳಿಲ್ಲದೆ ಮಳೆಯೆಂದೂ ಬಾರದು
ಪ್ರಕೃತಿ ಎಂದರೆ ವಿಕೋಪ ಸಹಜ
ಹೆಣ್ಣು ಎಂಬ ಮಾಯೆಯಲಿ ಅದು ವಿಪರೀತ
By Ravi N

Comments