Kannada Kavithe From Ravi
By Ravi N
ಅನುದಿನದ ಆನಂದ ದಾಂಪತ್ಯದ ಬಂಧ
ಸಂಸಾರದಿ ಸಂಗಾತಿಯ ಸಾಂಗತ್ಯ ಚೆಂದ
ಬೇವು ಬೆಲ್ಲದ ಬಾಳಿಗೆ ಹರುಷದ ಬಂಧ
ಮಿಡಿವ ಮನಗಳ ಮಿಲನವಾದರೆ ಚೆಂದ
ಮದುವೆ ಸ್ವರ್ಗದಲ್ಲಾದ ಎರಡು ಹೃದಯಗಳ ಬಂಧ
ವಾತ್ಸಲ್ಯಕೆ ಒಡಲಾಗಿ ಬಾಳಿಗೆ ಬೆಳಕಾಗಿ ಬಂಧುತ್ವ ಬೆಸೆಯುವ ನವ ಜೋಡಿಯಾಗಿ ಸುಖ ಸಂಸಾರಕೆ ನಂಬಿಕೆಯ ಬುನಾದಿಯಾಗಿ ನೂರ್ಕಾಲ ಸುಖವಾಗಿ ಸಂಯಮದಿ ಜೊತೆಯಾಗಿ ಇರಲಿ ಸಂಸಾರದ ನೌಕೆಯ ಪಯಣ ಬಲು ಹಿತವಾಗಿ
By Ravi N

Comments